ಬೆಳಗಾವಿ: ಎಂಇಎಸ್ ಮನವಿ ಮೇರೆಗೆ ಡಿ. 6 ಕ್ಕೆ ಬೆಳಗಾವಿ ಭೇಟಿ ನೀಡಲು ನಿರ್ಧರಿಸಿರುವ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ವಿರುದ್ಧ ಪ್ರತಿಬಂಧಕಾಜ್ಞೆ ಹೊರಡಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದೊಡಮಂಗಡಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಈಗಾಗಲೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಿಂದ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ರವಾನಿಸಿದ್ದಾರೆ. ಎರಡೂ ರಾಜ್ಯಗಳ ಮಧ್ಯೆ ಪ್ರಕ್ಷ್ಯುಬ್ದ ಪರಿಸ್ಥಿತಿ ಇರುವಾಗ ಮಹಾರಾಷ್ಟ್ರ ಸಚಿವರು ಈ ಸಮಯದಲ್ಲಿ ಬರೋದು ಸೂಕ್ತ ಅಲ್ಲ.
ಬರಬಾರದು ಅನ್ನೋ ಸಂದೇಶ ಈಗಾಗಲೇ ಕಳಿಸಿದ್ದೇವೆ. ಈ ಹಿಂದೆ ಹಲವಾರು ಬಾರಿ ಈ ರೀತಿ ಪ್ರಯತ್ನಿಸಿದಾಗ ಕರ್ನಾಟಕ ಸರ್ಕಾರ ಏನು ಕ್ರಮ ಕೈಗೊಂಡಿದೆಯೋ? ಅದೇ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವರ ವಿರುದ್ಧ ಪ್ರತಿಬಂಧಕಾಜ್ಞೆ ಕಾಯ್ದೆಗೆ ಸಿದ್ಧ: ಸಿಎಂ ಬೊಮ್ಮಾಯಿ ಸುಳಿವು - ಮಹಾರಾಷ್ಟ್ರ ಸರ್ಕಾರ
ನಾಡದ್ರೋಹಿ ಎಂಇಎಸ್ ಮನವಿ ಮೇರೆಗೆ ಡಿ. 6 ಕ್ಕೆ ಬೆಳಗಾವಿ ಭೇಟಿ ನೀಡಲು ನಿರ್ಧರಿಸಿರುವ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ವಿರುದ್ಧ ಪ್ರತಿಬಂಧಕಾಜ್ಞೆ ಕಾಯ್ಕೆ ಹೊರಡಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ: ಸಿಎಂ ಬೊಮ್ಮಾಯಿ
ಜತ್ತ ಕನ್ನಡಿಗರಿಗೆ ನೀರು ಸಿಗಲಿ:ಜತ್ತ ಕನ್ನಡಿಗರ ಪರ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರ ನೀರಾವರಿ ಯೋಜನೆಗೆ 2000 ಕೋಟಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜತ್ತ ತಾಲೂಕಿನ ಕನ್ನಡ ಕುಲಬಾಂಧವರು ಹಲವಾರು ವರ್ಷಗಳಿಂದ ನೀರು ಇಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ. ಆ ಭಾಗಕ್ಕೆ ಕುಡಿಯುವ ನೀರಿನ ಸಮಸ್ಯೆ ಇದೆ, ಮಹಾರಾಷ್ಟ್ರ ಸರಕಾರ ಕುಡಿಯುವ ನೀರಿನ ಯೋಜನೆ ಮಾಡುವುದ್ದಾಗಿ ಹೇಳ್ತಾರೆ. ಆ ಭಾಗದ ಜನರಿಗೆ ನೀರು ತಲುಪಿಸುವುದು ಬಹಳ ಮುಖ್ಯವಾಗಿದೆ. ಆ ಕಾರ್ಯ ಬೇಗ ಸಾಕಾರಗೊಳ್ಳಲೆಂದು ಆಶಿಸಿದರು.
ಇದನ್ನೂಓದಿ:ಪ್ರತಿಮೆ ಸ್ಥಾಪನೆ ವಿಚಾರ ಎರಡು ಸಮುದಾಯದಲ್ಲಿ ಘರ್ಷಣೆ: ಕೊಡಿಗೇಹಳ್ಳಿಯಲ್ಲಿ ಪೊಲೀಸ್ ಬಿಗಿ ಭದ್ರತೆ