ಕರ್ನಾಟಕ

karnataka

ETV Bharat / state

ಉಪ ಚುನಾವಣೆ ಬಳಿಕ ಮಹದಾಯಿ ಕುರಿತು ಮಂತ್ರಿಗಳೊಂದಿಗೆ ಚರ್ಚೆ: ಸಚಿವ ರಮೇಶ್​​ ಜಾರಕಿಹೊಳಿ - ಮಹದಾಯಿ ಪ್ರಕರಣ

ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಗೋವಾ ಸರ್ಕಾರ ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿತ್ತು. ಅದರಲ್ಲಿ ಕರ್ನಾಟಕ ಸರ್ಕಾರ ನೀರನ್ನು ಡೈವರ್ಟ್ ಮಾಡಿಕೊಂಡಿದ್ದಾರೆ ಎಂದು ಕೋರ್ಟ್ ಮುಂದೆ ಹೇಳಿದ್ದಾರೆ. ಹೀಗಾಗಿ ಕೋರ್ಟ್‌ ವಾಸ್ತವಿಕ ಸ್ಥಿತಿಗತಿಗಳ ಬಗ್ಗೆ ವರದಿ ನೀಡುವಂತೆ ತಿಳಿಸಿದೆ ಎಂದಿದ್ದಾರೆ.

Ramesh Jarkiholi
ಸಚಿವ ರಮೇಶ್​​ ಜಾರಕಿಹೊಳಿ

By

Published : Mar 1, 2021, 4:45 PM IST

ಬೆಳಗಾವಿ: ಉಪಚುನಾವಣೆಗಳು ಮುಗಿದ ಮೇಲೆ ಕೇಂದ್ರದ ಜಲಸಂಪನ್ಮೂಲ ಸಚಿವರು ಮಹದಾಯಿ ಪ್ರಕರಣ ಕುರಿತು ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅಲ್ಲಿಯೇ ಕುಳಿತು ಚರ್ಚೆ ನಡೆಸಿ ಶೀಘ್ರದಲ್ಲೇ ಮಹದಾಯಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಸರ ಇಲಾಖೆ ಮತ್ತು ವನ್ಯಜೀವಿ ಇಲಾಖೆಯಿಂದ ಅನುಮತಿ ಪಡೆದುಕೊಂಡು ಕೆಲಸ ಆರಂಭ ಮಾಡುವಂತೆ ನ್ಯಾಯಾಲಯ ಹೇಳಿದರೂ ಒಂದು ವರ್ಷ ಕಳೆದರೂ ಮಹದಾಯಿ ಕೆಲಸ ಆರಂಭ ಆಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

ಉಪಚುನಾವಣೆ ಬಳಿಕ ಮಹದಾಯಿ ಕುರಿತು ಮಂತ್ರಿಗಳೊಂದಿಗೆ ಚರ್ಚೆ: ಸಚಿವ ರಮೇಶ್​​ ಜಾರಕಿಹೊಳಿ

ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಗೋವಾ ಸರ್ಕಾರ ಸುಳ್ಳು ಅಫಿಡೆವಿಟ್ ಸಲ್ಲಿಕೆ ಮಾಡಿತ್ತು. ಅದರಲ್ಲಿ ಕರ್ನಾಟಕ ಸರ್ಕಾರ ನೀರನ್ನು ಡೈವರ್ಟ್ ಮಾಡಿಕೊಂಡಿದೆ ಎಂದು ಕೋರ್ಟ್ ಮುಂದೆ ಹೇಳಿತ್ತು. ಹೀಗಾಗಿ ಕೋರ್ಟ್‌ ವಾಸ್ತವಿಕ ಸ್ಥಿತಿಗತಿಗಳ ಬಗ್ಗೆ ವರದಿ ನೀಡುವಂತೆ ತಿಳಿಸಿದೆ. ಗೋವಾ ಹೇಳುವ ಪ್ರಕಾರ ನಾವೇನು ಕಾನೂನು ಉಲ್ಲಂಘನೆ ಮಾಡಿಲ್ಲ. ಹೀಗಾಗಿ ಕೋರ್ಟ್​​ನಲ್ಲಿ ಸೋಲುವ ಪ್ರಮೇಯವೇ ಬರುವುದಿಲ್ಲ ಎಂದರು.

ಅಂತರಾಜ್ಯ ಪ್ರಕರಣ ಆಗಿರುವುದರಿಂದ ನಾವು ನೇರವಾಗಿ ನೀರನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಸಿಡಬ್ಲ್ಯುಸಿ ವಾಟರ್ ಇಲಾಖೆಯ ಅನುಮತಿ ಬೇಕಿದೆ. ಅವರು ಪೆಂಡಿಂಗ್ ಇಟ್ಟುಕೊಂಡಿದ್ದಾರೆ. ನಮ್ಮ ರಾಜ್ಯದಿಂದ ಮಹದಾಯಿ ಪ್ರಕರಣಕ್ಕೆ ಹಿನ್ನಡೆಯಾಗಿಲ್ಲ. ಸಿಡಬ್ಲ್ಯುಸಿ ಇಲಾಖೆಗೆ ಪದೇ ಪದೆ ಒತ್ತಡ ಹೇರಲಾಗುತ್ತಿದ್ದು, ಮುಂದಿನವಾರ ಮತ್ತೊಮ್ಮೆ ದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಆದಷ್ಟು ಬೇಗ ಮಹದಾಯಿ ಯೋಜನೆ ಮಾಡಿಸುತ್ತೇನೆ ಎಂದರು.

ರಾಜ್ಯದ ಹಿತಬಂದಾಗ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಜೊತೆಗೂಡಿ ಕೆಲಸ ಮಾಡುತ್ತೇವೆ. ಅದರಲ್ಲಿ ಕಾಂಗ್ರೆಸ್, ಬಿಜೆಪಿ ಅಂತಾ ಇರೋದಿಲ್ಲ. ಮಹದಾಯಿ ವಿಚಾರದಲ್ಲಿ ರಾಜ್ಯದ ಜನತೆ ನಿಶ್ಚಿತವಾಗಿ ಇರಬೇಕು. ಮುಂಬರುವ ದಿನದಲ್ಲಿ ಸುಪ್ರೀಂಕೋರ್ಟ್​​ನಲ್ಲಿ ಮಹದಾಯಿ ವಿಚಾರಣೆ ಇದೆ. ಆಗ ಸುಪ್ರೀಂ ಕಮೀಟಿ ವರದಿ ನೀಡಲಿದ್ದು, ರಾಜ್ಯದ ಪರವಾಗಿ ಬರಲಿದೆ. ಕಳೆದ ವಾರ ಕೇಂದ್ರದ ಜಲಶಕ್ತಿ ಮಂತ್ರಿಗಳನ್ನು ಭೇಟಿ ಆಗಿದ್ದೇನೆ. ಅವರು ಪಾರ್ಲಿಮೆಂಟ್ ಉಪಚುನಾವಣೆ ಮುಗಿದ ಮೇಲೆ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಮಂತ್ರಿಗಳು ಸಭೆ ನಡಯಲಿದೆ. ಮೂರು ರಾಜ್ಯದವರು ಸೇರಿ ಕುಳಿತು ಚರ್ಚೆ ನಡೆಸಲಿದ್ದೇವೆ ಎಂದರು.

ಇದನ್ನೂ ಓದಿ:ಮಣ್ಣು ತೆಗೆಯುವಾಗ ಗುಡ್ಡ ಕುಸಿದು ಇಬ್ಬರು ಯುವಕರ ದುರ್ಮರಣ

ABOUT THE AUTHOR

...view details