ಬೆಳಗಾವಿ : ಲೋಕಸಭಾ ಚುನಾವಣೆಯಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ಸುಮಲತಾ ಅಂಬರೀಶ್ ದಿಗ್ವಿಜಯ ಮತ್ತು ರೆಬಲ್ ಸ್ಟಾರ್ ಅಂಬರೀಶ ಜನ್ಮದಿನದ ಪ್ರಯುಕ್ತ ನಾಳೆ ಮಂಡ್ಯದಲ್ಲಿ ಅಂಬಿ ಜಯಂತ್ಯುತ್ಸವ ನಡೆಯಲಿದೆ.
ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಭರ್ಜರಿ ಜಯ ಸಾಧಿಸಿರುವ ಖುಷಿ ಮತ್ತು ಅಂಬಿ ಜಯಂತ್ಯುತ್ಸವ ಪ್ರಯುಕ್ತ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯಮಿ ನಾರಾಯಣ ಕಲಾಲ್ ಅವರು ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳುವ ಜನರಿಗೆ ಧಾರವಾಡ ಪೇಡಾ ಹಂಚಲು ತಿರ್ಮಾನಿಸಿದ್ದಾರೆ. ಅದಕ್ಕಾಗಿ ಸುಮಾರು 4 ಕ್ವಿಂಟಲ್ ಪೇಡಾ ಸಹ ಖರೀದಿಸಿದ್ದಾರೆ.
ಅಂಭಿ ಅಭಿಮಾನಿಯಿಂದ ಧಾರವಾಡ ಪೇಡಾ ಹಂಚಿಕೆ ಕಲಾಲ್ ಅವರುಅಂಬರೀಶ್ ಜೊತೆ ನಿಕಟ ಸಂಬಂಧ ಹೊಂದಿದ್ದರು. ಕುಂದಾನಗರಿಗೆ ಬಂದಾಗಲೆಲ್ಲ ಕಲಾಲ್ ಅವರ ಗೆಸ್ಟ್ ಹೌಸ್ನಲ್ಲೇ ಉಳಿಯುತ್ತಿದ್ದರು. ಅಂಬಿ ಕೊನೆ ಆಸೆಯಾಗಿದ್ದ ಯಶ್ ದಂಪತಿಗೆ ಕಲಘಟಗಿ ತೊಟ್ಟಿಲು ನೀಡುವ ವಿಚಾರನ್ನು ನಾರಾಯಣರ ಮುಂದೆ ಹೇಳಿಕೊಂಡಿದ್ದರು. ಅವರ ಅಗಲಿಕೆಯ ನಂತರ ತೊಟ್ಟಿಲು ನಿರ್ಮಿಸಿ ಕಿತ್ತೂರು ಚೆನ್ನಮ್ಮ ಕೋಟೆಯಲ್ಲಿ ವಿಶೇಷ ಪೂಜೆ ನೆರವೇರಿಸಿ ಯಶ್ ದಂಪತಿಗೆ ಕಲಾಲ್ ನೀಡಿದ್ದರು.
ಸದ್ಯ ಮೈತ್ರಿ ಪಕ್ಷದ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಜಯ ಗಳಿಸಿದ್ದಾರೆ. ಈ ಖುಷಿಯನ್ನು ಧಾರವಾಡ ಪೇಡಾ ವಿತರಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ ಬೆಳಗಾವಿಯ ಉದ್ಯಮಿ ಕಲಾಲ್.