ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೀರೆಮಠವು ತನ್ನದೆಯಾದ ಭಕ್ತ ವೃಂದವನ್ನು ಹೊಂದಿದ್ದು ಈ ಮಠಕ್ಕೆ ದೇಶ ವಿದೇಶದಿಂದ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ಪ್ರತಿ ವರ್ಷ ದಸರಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದ ಹುಕ್ಕೇರಿ ಹಿರೇಮಠವು ಈ ಬಾರಿ ಕೊರೊನಾ ಮಹಾಮಾರಿಯಿಂದ ದಸರಾ ಹಬ್ಬವನ್ನು ಯಾವ ಭಕ್ತರಿಗೆ ದೇವಿಯ ದರ್ಶನವಿಲ್ಲದೆ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತಿದೆ.
ಅಪಾರ ಭಕ್ತ ಸಮೂಹವನ್ನು ಹೊಂದಿದ ಹುಕ್ಕೇರಿ ಹಿರೇಮಠದ ಭಕ್ತರ ಅನಕೂಲಕ್ಕಾಗಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಸಮ್ಮುಖದಲ್ಲಿ ದಸರಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಭಕ್ತರಿಗೆ ದೇವಿಯ ದರ್ಶನ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹುಕ್ಕೇರಿ ಹಿರೇಮಠ್ (Hukkeri Hiremath) ಎಂಬ ಫೇಸ್ಬುಕ್ ಪೇಜ್ನಿಂದ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುತ್ತಿದ್ದು ಇದರಿಂದ ಭಕ್ತರು ಸಹಿತ ಹುಕ್ಕೇರಿ ಮಠದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರೆ.