ಬೆಳಗಾವಿ:ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಸಂದೇಶ ಹರಿಬಿಟ್ಟ ಆರೋಪದಡಿ ಸಿಆರ್ಪಿಎಫ್ ಯೋಧನ ವಿರುದ್ಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ ಜಾರಕಿಹೊಳಿ ವಿರುದ್ಧ ಅವಹೇಳನ ಸಂದೇಶ: ಯೋಧನ ವಿರುದ್ಧ ದೂರು - undefined
ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಿಆರ್ಪಿಎಫ್ ಯೋಧ ಅವಹೇಳನಕಾರಿ ಸಂದೇಶ ರವಾನಿಸಿದ್ದು, ಯೋಧನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಲಾಗಿದೆ.
ಶಾಸಕ ರಮೇಶ ಜಾರಕಿಹೊಳೆ
ಈ ಸಂಬಂಧ ಗೋಕಾಕ್ ತಾಲೂಕಿನ ಖಾನಾಪುರ ಗ್ರಾಮದ ಸತ್ತಿಗೌಡ ಪಾಟೀಲ್ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಆರ್ಪಿಎಫ್ ಯೋಧ ಚರಣ ಮಂಗೋಳಿ ಕೆಟ್ಟದಾಗಿ ಸಂದೇಶ ರವಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪರ-ವಿರೋಧ ಚರ್ಚೆ ಆರಂಭವಾಗುತ್ತಿದ್ದಂತೆ, ಯೋಧ ಚರಣ ಮಂಗೋಳಿ ಸಂದೇಶವನ್ನು ಡಿಲಿಟ್ ಮಾಡಿದ್ದಾರೆ.
Last Updated : Jul 25, 2019, 11:49 PM IST