ಬೆಳಗಾವಿ:ಪೊಲೀಸ್ ಪೇದೆ ಮೇಲಿನ ಹಲ್ಲೆ ಆರೋಪ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ಸಿಆರ್‌ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಹಿಂಡಲಗಾ ಜೈಲಿಂದ ಬಿಡುಗಡೆ ಆಗಿದ್ದು, ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳಲಾಗುವುದು ಎಂದು ಡೆಪ್ಯೂಟಿ ಕಮಾಂಡೆಂಟ್ ರಘುವಂಶಿ ಉಪಾಧ್ಯ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಪೇದೆ ಮೇಲೆ ಹಲ್ಲೆ ಪ್ರಕರಣ: ಹಿಂಡಲಗಾ ಜೈಲಿನಿಂದ ಸಿಆರ್‌ಪಿಎಫ್ ಯೋಧನ ಬಿಡುಗಡೆ
ಬೆಳಗಾವಿಯ ಹಿಂಡಲಗಾ ಜೈಲಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿನ್ ಸಾವಂತ್ ಅವರನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿಯಲ್ಲಿರುವ ಟ್ರೈನಿಂಗ್ ಸೆಂಟರ್ಗೆ ಕರೆದೊಯ್ಯಲಾಗುವುದು. ಅಲ್ಲಿ ಯೋಧನಿಂದ ಘಟನೆ ಕುರಿತು ಮಾಹಿತಿ ಪಡೆದುಕೊಳ್ಳಲಾಗುವುದು.
ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್ ಇಂದು ಜೈಲಿಂದ ಬಿಡುಗಡೆ ಬಳಿಕ ಪ್ರತಿದೂರು ನೀಡುವ ಬಗ್ಗೆ ನಿರ್ಧರಿಸಲಾಗುವುದು. ಘಟನೆ ಕುರಿತು ಸಂಪೂರ್ಣ ವಿವರವನ್ನ ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ. ಯೋಧನನ್ನು ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳಲಾಗುವುದು. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪೊಲೀಸರ ಮೇಲೆ ಕೇಸ್ ಮಾಡುವ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಮಾಸ್ಕ್ ಧರಿಸಿ ಹೊರಬಂದ ಸಚಿನ್:
ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಸಿಆರ್‌ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಹಾಗೂ ಸದಲಗಾ ಠಾಣೆಯ ಪೇದೆಗಳ ಮಧ್ಯೆ ಗಲಾಟೆ ಆಗಿತ್ತು. ಹಲ್ಲೆ ಆರೋಪದಡಿ ಯೋಧನನ್ನು ಠಾಣೆಗೆ ಕರೆದೊಯ್ದು ಕೈಗೆ ಕೋಳ ತೊಡಿಸಿದ್ದರು.
ಡೆಪ್ಯೂಟಿ ಕಮಾಂಡೆಂಟ್ ರಘುವಂಶಿ ಉಪಾಧ್ಯ ಯೋಧನನ್ನು ಕಳ್ಳರಂತೆ ನಡೆಸಿಕೊಂಡ ಪೊಲೀಸರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಇವತ್ತು ಜೈಲಿನಿಂದ ಹೊರಬಂದ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಮುಖಕ್ಕೆ ಮಾಸ್ಕ್ ಧರಿಸಿದ್ದರು. ಮಾಸ್ಕ್ ಧರಿಸಿಯೇ ಅಧಿಕಾರಿಗಳ ಜತೆಗೆ ಖಾನಾಪುರದ ಕ್ಯಾಂಪಿಗೆ ತೆರಳಿದರು.