ಚಿಕ್ಕೋಡಿ:ಅಥಣಿಯಿಂದ ಬೆಳಗಾವಿಗೆ ಪ್ರಯಾಣಿಸಬೇಕಾದರೆ ಸುಮಾರು 200 ಕಿ.ಮೀ. ಕ್ರಮಿಸಬೇಕಾದ ಪರಿಸ್ಥಿತಿಯಿದೆ. ಹಾಗಾಗಿ ಅಥಣಿಯನ್ನು ಜಿಲ್ಲೆಯಾಗಿಸಿ ಇಲ್ಲಿನ ಜನರ ತೊಂದರೆಗಳಿಗೆ ವಿರಾಮ ಹೇಳಿ ಎಂದು ಜಿಲ್ಲಾ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ.
ಬಳ್ಳಾರಿ ವಿಭಜನೆ ಎಫೆಕ್ಟ್! ಅಥಣಿಯನ್ನೂ 'ಪ್ರತ್ಯೇಕ ಜಿಲ್ಲೆ' ಘೋಷಿಸಲು ಒತ್ತಾಯ - ಸಿಎಂ ಬಿ.ಎಸ್.ಯಡಿಯೂರಪ್ಪ
ಬೆಳಗಾವಿ ಜಿಲ್ಲೆಯ ಅಥಣಿಯನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕತೆಯ ಕೂಗು ಅನಿವಾರ್ಯವಾಗಿದೆ ಎಂದು ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಅಥಣಿಯನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಿಸಲು ಒತ್ತಾಯ
ಅಥಣಿ 109 ಹಳ್ಳಿಗಳನ್ನು ಒಳಗೊಂಡಿದೆ. ತಾಲೂಕಿನ ಕೊನೆಯ ಹಳ್ಳಿ ಕೊಟ್ಟಲಗಿಯಿಂದ ಬೆಳಗಾವಿಗೆ ಪ್ರಯಾಣಿಸಬೇಕಾದರೆ ಸುಮಾರು 200 ಕಿ.ಮೀ ಆಗುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಅದಕ್ಕಾಗಿ ಅಥಣಿಯನ್ನು ಜಿಲ್ಲೆಯನ್ನಾಗಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.
ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮುತುವರ್ಜಿ ವಹಿಸಿ ಮುಂದಿನ ಕ್ಯಾಬಿನೆಟ್ನಲ್ಲಿ ಪ್ರಸ್ತಾಪಿಸಬೇಕಿದೆ. ಜೊತೆಗೆ ಇದೇ ತಾಲೂಕಿನವರಾದ ಡಿಸಿಎಂ ಲಕ್ಷ್ಮಣ ಸವದಿಯವರೂ ಈ ಉತ್ತಮ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.