ಬೈಲಹೊಂಗಲ (ಬೆಳಗಾವಿ):ಲಾಕ್ ಡೌನ್ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಲಿಂಗಾಯತ ಕಮ್ಮಾರ (ಕಂಬಾರ) ಹಾಗೂ ವೃತ್ತಿನಿರತ ಬಡಿಗೇರ ಕರಕುಶಲ ಕಾರ್ಮಿಕರಿಗೆ ಸರಕಾರದ ಪ್ಯಾಕೇಜ್‌ನಲ್ಲಿ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಲಿಂಗಾಯತ ಕಂಬಾರ, ಬಡಿಗೇರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ, ಸಂಘದ ರಾಜ್ಯಾಧ್ಯಕ್ಷ ಮಡಿವಾಳಪ್ಪ ಬಡಿಗೇರ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾನಾ ಕುಶಲಕರ್ಮಿಗಳಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈಗಿನ ಪ್ಯಾಕೇಜ್‌ನಲ್ಲಿ ಬಡಗಿತನ, ಕಮ್ಮಾರ ಕೆಲಸ ಮಾಡುತ್ತಿರುವ ಕುಶಲಕರ್ಮಿಗಳಿಗೂ ಆರ್ಥಿಕ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು.