ಬೆಳಗಾವಿ:ಮೊಬೈಲ್ ಅಂಗಡಿ ಮಾಲೀಕನಿಗೆ ಜಿಎಸ್ಟಿ ನಂಬರ್ ಮಂಜೂರು ಮಾಡಲು ಹಣದ ಬೇಡಿಕೆ ಇಟ್ಟಿದ್ದ ಇಲ್ಲಿನ ವಾಣಿಜ್ಯ ತೆರಿಗೆ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾನೆ.
ವಾಣಿಜ್ಯ ತೆರಿಗೆ ಇಲಾಖೆಯ ಇನ್ಸ್ಪೆಕ್ಟರ್ ಮೆಹಬೂಬ್ ಬಾಬಾಲಾಲ್ ಸಿಪಾಯಿ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ. ಹೊಸ ಮೊಬೈಲ್ ಅಂಗಡಿಗೆ ಜಿಎಸ್ಟಿ ನಂಬರ್ ನೀಡುವ ವಿಚಾರಕ್ಕೆ ಮೆಹಬೂಬ್ 2 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕಾಕತಿ ಮೂಲದ ನದೀಮ ಮುಲ್ಲಾ ಎಂಬುವರು ಜೆಎಸ್ಟಿ ನಂಬರ್ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು.