ಅಥಣಿ:ಕೃಷ್ಣಾ ನದಿಪ್ರವಾಹ ಬಂದು ಎರಡು ತಿಂಗಳು ಕಳೆಯುತ್ತಾ ಬಂದಿದೆ. ಆದ್ರು ಮುಳುಗಡೆಯಾದ ಹಾಗೂ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿನ ಕೇಂದ್ರ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ''ಬದುಕಿಸಿ ಇಲ್ಲವೇ ಮುಳುಗಿಸಿ'' ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂದು ಪಾದಯಾತ್ರೆಯನ್ನು ಸಂತ್ರಸ್ತರು ಹಮ್ಮಿಕೊಂಡಿದ್ದರು.
ಸಂತ್ರಸ್ತರಿಗೆ ಶಾಸ್ವತ ಪುನರ್ವಸತಿ, ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಲಾಯಿತು. ಅಥಣಿ ತಾಲೂಕಿನ ಕೃಷ್ಣಾ ನದಿತೀರದ ಪ್ರವಾಹ ಪೀಡಿತ ಎಲ್ಲ ಗ್ರಾಮಗಳ ನೆರೆ ಸಂತ್ರಸ್ತರು ದರೂರ ಸೇತುವೆಯಿಂದ ಅಥಣಿ ತಹಶಿಲ್ದಾರ್ ಕಚೇರಿಯವರೆಗೆ ''ಬದುಕಿಸಿ ಇಲ್ಲವೇ ಮುಳುಗಿಸಿ'' ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂದು ಪಾದಯಾತ್ರೆಯನ್ನು ಮಾಡಿದ್ರು.
ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಚಾಲನೆ ನೀಡಿದರು. ಪಾದಯಾತ್ರೆಲ್ಲಿ ದಲಿತ ಸಂಘರ್ಷ ಸಮಿತಿ ಭೀಮ ವಾದ ಮತ್ತು ರೈತ ಪರ ಸಂಘಟನೆ ಸೇರಿದಂತೆ ನೂರಾರು ಮಹಿಳೆಯರು ಸೇರಿ ಐದು ನೂರಕ್ಕೂ ಅಧಿಕ ಸಂತ್ರಸ್ತರು ಭಾಗಿಯಾಗಿದ್ದರು.ಅಥಣಿ ಅಂಬೇಡ್ಕರ್ ವೃತ್ತದ ರಸ್ತೆ ತಡೆ ಮಾಡಿ ರಸ್ತೆಯಲ್ಲಿ ಕೆಲಹೊತ್ತು ಮಲಗಿ ಪ್ರತಿಭಟನೆ ನಡೆಸಿದರು.