ಕರ್ನಾಟಕ

karnataka

ETV Bharat / state

ಡಿ.4 ರಂದು ರೈತರಿಂದ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ: ಕೋಡಿಹಳ್ಳಿ ಚಂದ್ರಶೇಖರ್ - ಈಟಿವಿ ಭಾರತ ಕರ್ನಾಟಕ

ಡಿಸೆಂಬರ್ 4 ರಂದು ಬೆಳಗ್ಗೆ 11 ಗಂಟೆಗೆ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಹೋಗಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

deceber-4-farmers-will-besieging-suvarna-soudha-says-kodihalli-chandrashekar
ಡಿ.4ರಂದು ರೈತರಿಂದ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ: ಕೊಡಿಹಳ್ಳಿ ಚಂದ್ರಶೇಖರ್

By ETV Bharat Karnataka Team

Published : Dec 2, 2023, 9:11 PM IST

Updated : Dec 2, 2023, 10:18 PM IST

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ

ಚಿಕ್ಕೋಡಿ(ಬೆಳಗಾವಿ): ಚಳಿಗಾಲದ ಅಧಿವೇಶನದ ಮೊದಲ ದಿನವೇ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ರಾಜ್ಯ ರೈತ ಸಂಘ ತೀರ್ಮಾನಿಸಿದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, "ಅಧಿವೇಶನದ ಮೊದಲ ದಿನ ಸೋಮವಾರ ಬೆಳಗ್ಗೆ 11 ಗಂಟೆಗೆ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಹೋಗಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ರಾಜ್ಯದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಾದಯಾತ್ರೆ ಮೂಲಕ ತೆರಳಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ಪಡೆದಿದೆ. ಆದರೆ, ರಾಜ್ಯ ಸರ್ಕಾರ ಕೃಷಿ ಕಾಯ್ದೆಯನ್ನು ಇನ್ನೂ ವಾಪಸ್ ಪಡೆದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಈ ಹಿಂದೆ ರೈತರ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೆಂಬಲಿಸಿದ್ದರು. ಕಳೆದ ಅಧಿವೇಶನದಲ್ಲಿ ಸಚಿವ ಶಿವಾನಂದ ಪಾಟೀಲ್ ಕೃಷಿ ಕಾಯ್ದೆ ವಾಪಸ್ ಪಡೆಯುವ ಬಿಲ್ ಮಂಡಿಸಲು ಮುಂದಾದರು. ಆಗ ವಿಪಕ್ಷದವರು ವಿರೋಧಿಸಿದ್ದರು. ಬಿಜೆಪಿಯವರು ತಂದಿರೋ ಕೃಷಿ ಕಾಯ್ದೆ ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾದ ಮುಂದಾಗಿದೆ. ಬಿಜೆಪಿ ಜಾರಿ ತಂದ ಭೂಸುಧಾರಣಾ ಕಾಯ್ದೆಯನ್ನ ಅನುಷ್ಠಾನಗೊಳಿಸುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ" ಎಂದು ಕಿಡಿಕಾರಿದರು.

ಕೋಡಿಹಳ್ಳಿ ಚಂದ್ರಶೇಖರ್ ಪ್ರಮುಖ ಬೇಡಿಕೆಗಳು: ಕೃಷಿ ಕಾಯ್ದೆ ವಾಪಸ್, MSP ಶಾಸನಬದ್ಧ ಕಾಯ್ದೆ ಜಾರಿ, ಬರಗಾಲದ ತುರ್ತು ಕಾರ್ಯಕ್ರಮಗಳು ಜಾರಿ, ಸೆಪ್ಟೆಂಬರ್ 22ರ ವಿದ್ಯುತ್ ಕಾಯ್ದೆ ವಾಪಸ್‌, ಕಬ್ಬಿಗೆ FRP ಜೊತೆ SAP ನೀಡಬೇಕು. ತೆಂಗಿಗೆ ವಿದೇಶಿದಿಂದ ಬರುವ ಉತ್ಪನ್ನಕ್ಕೆ ಆಮದು ಸುಂಕ ಹೆಚ್ಚಿಸಬೇಕು. ಇಲ್ಲವಾದರೆ ಪ್ರತಿ ಕ್ವಿಂಟಾಲ್‌ಗೆ 25000/- ರೂ ನಿಗದಿ ಮಾಡಬೇಕು. ಬಗರ್ ಹುಕ್ಕಂ ಸಾಗುವಳಿ ತಕ್ಷಣವೇ ಜಾರಿ ಮಾಡಬೇಕು. ಮಹಾದಾಯಿ ಹಾಗೂ ಮೇಕೆದಾಟು ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಬೇಕು.

ಸರ್ಕಾರ ನವೆಂಬರ್ 1 ರಿಂದ ಹಾಲಿನ ದರ 2 ರೂಪಾಯಿ ಕಡಿತ ಮಾಡಿ, ಪಶು ಆಹಾರದ ಬೆಲೆಯನ್ನು ಕೆಜಿಗೆ 2 ರೂಪಾಯಿ ಹೆಚ್ಚು ಮಾಡಿ ರೈತರಿಂದ ಒಟ್ಟು 4 ರೂಪಾಯಿಯನ್ನು ಬಲವಂತವಾಗಿ ಕಿತ್ತುಕೊಳ್ಳುವ ನೀತಿಯನ್ನು ಜಾರಿಗೆ ತಂದಿದೆ. ತಕ್ಷಣವೇ ಇದನ್ನು ರದ್ದು ಮಾಡಬೇಕು. ಬೆಳಗಾವಿ ಜಿಲ್ಲೆಯ ರಾಯಬಾಗ್, ಅಥಣಿ , ಕಾಗವಾಡ, ಚಿಕ್ಕೋಡಿಗಳಲ್ಲಿ ನೀರಾವರಿ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಬೇಡಿಕೆಗಳನ್ನು ಇಟ್ಟರು.

ಇದನ್ನೂ ಓದಿ:ಬೆಳಗಾವಿ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು: ಕುರುಬೂರು ಶಾಂತಕುಮಾರ್

Last Updated : Dec 2, 2023, 10:18 PM IST

ABOUT THE AUTHOR

...view details