ಬೆಳಗಾವಿ :ಆ್ಯಂಬುಲೆನ್ಸ್ ಸಿಗದ ಹಿನ್ನೆಲೆ ಕುಟುಂಬವೊಂದು ಮೃತದೇಹವನ್ನು ಸೈಕಲ್ನಲ್ಲಿ ಸಾಗಿಸಿದ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಆ್ಯಂಬುಲೆನ್ಸ್ ಸಿಗದೆ ಸೈಕಲ್ನಲ್ಲಿ ಮೃತದೇಹ ಸಾಗಾಟ: ಬೆಳಗಾವಿಯಲ್ಲೊಂದು ಮನಕಲಕುವ ಘಟನೆ - Dead Body transport in Bicycle In Hubli
ಆ್ಯಂಬುಲೆನ್ಸ್ ಸಿಗದೆ ಮೃತದೇಹವನ್ನು ಸೈಕಲ್ನಲ್ಲಿ ಅಂತ್ಯ ಸಂಸ್ಕಾರಕ್ಕೆ ಸಾಗಿಸಿದ ಘಟನೆ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಎಂ.ಕೆ. ಹುಬ್ಬಳ್ಳಿ ಗ್ರಾಮದ 70 ವರ್ಷ ವೃದ್ಧ ಚಿಕಿತ್ಸೆಗೆ ತೆರಳಲು ಆ್ಯಂಬುಲೆನ್ಸ್ ಸಿಗದೆ ನಿನ್ನೆ ರಾತ್ರಿ ಮನೆಯಲ್ಲಿ ಪರದಾಡಿದ್ದರು. ಬಳಿಕ ರಾತ್ರಿಯೇ ಮನೆಯಲ್ಲಿ ಮೃತಪಟ್ಟಿದ್ದರು. ಕೊನೆಗೆ ಮೃತದೇಹ ಸಾಗಿಸಲು ಸಹ ಆ್ಯಂಬುಲೆನ್ಸ್ ಸಿಕ್ಕಿಲ್ಲ. ಹೀಗಾಗಿ, ಕಾದು ಕಾದು ಸುಸ್ತಾದ ಕುಟುಂಬಸ್ಥರು ಸೈಕಲ್ ಮೇಲೆ ಶವ ಇಟ್ಟು ಅಂತ್ಯಸಂಸ್ಕಾರಕ್ಕೆ ಸಾಗಿಸಿದ್ದಾರೆ.
ಜಿಲ್ಲೆಯಲ್ಲಿ ಓರ್ವ ಕೇಂದ್ರ ಸಚಿವ, ಡಿಸಿಎಂ ಸೇರಿ ನಾಲ್ವರು ಸಚಿವರಿದ್ದಾರೆ. ಇಷ್ಟೊಂದು ರಾಜಕೀಯ ಪ್ರಾತಿನಿಧ್ಯ ಇದ್ದರೂ ಜನರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಡಿಸಿಎಂ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಕೂಡ ಕೆಲ ದಿನಗಳ ಹಿಂದೆ ತರಕಾರಿ ಗಾಡಿಯಲ್ಲಿ ಹೆಣ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿತ್ತು.