ಕರ್ನಾಟಕ

karnataka

ETV Bharat / state

ರೈಲ್ವೆ ಹಳಿ ಪಕ್ಕದ ಕಾಲುವೆಯಲ್ಲಿ ಮಗುವಿನ ಶವ ಪತ್ತೆ - Belagavi news

ಬೆಳಗಾವಿಯ ಖಾನಾಪುರ ತಾಲೂಕಿನ ಪ್ರಭುನಗರ ಗ್ರಾಮದಲ್ಲಿ ರೈಲ್ವೆ ಹಳಿ ಪಕ್ಕದ ಮಳೆ ನೀರಿನ ಕಾಲುವೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಈ ಬಗ್ಗೆ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dead body of child
ಮಗುವಿನ ಶವ ಪತ್ತೆ

By

Published : Sep 9, 2020, 10:32 PM IST

ಬೆಳಗಾವಿ: ರೈಲ್ವೆ ಹಳಿ ಪಕ್ಕದ ಮಳೆ ನೀರಿನ ಕಾಲುವೆಯಲ್ಲಿ ಸರಿಸುಮಾರು ನಾಲ್ಕು ವರ್ಷ ವಯಸ್ಸಿನ ಅಪರಿಚಿತ ಮಗುವಿನ ಶವ ಪತ್ತೆಯಾಗಿದೆ.

ಜಿಲ್ಲೆಯ ಖಾನಾಪುರ ತಾಲೂಕಿನ ಪ್ರಭುನಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇಸೂರ-ಇದ್ದಲಹೊಂಡ ರೈಲ್ವೆ ನಿಲ್ದಾಣದ ಮಧ್ಯೆ ಇರುವ ಪ್ರಭುನಗರ ಕಾಲುವೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮಗು ಮೃತಪಟ್ಟಿರುವ ಬಗ್ಗೆ ರೈಲ್ವೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details