ಕರ್ನಾಟಕ

karnataka

ETV Bharat / state

ಭೀಕರ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬಾಲಕ ತಿಂಗಳು ಬಳಿಕ ಶವವಾಗಿ ಪತ್ತೆ - ಅಥಣಿ ಪೋಲಿಸ್ ಠಾಣೆ

ಕಳೆದ ಅ.7 ರಂದು ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ 13 ವರ್ಷದ ಬಾಲಕ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಅಥಣಿ ತಾಲೂಕಿನ ಇಂಗಳಗಾಂವ್​ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕನ ಶವ ದೊರೆತಿದೆ.

ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಬಾಲಕನ ಶವ ಪತ್ತೆ

By

Published : Sep 5, 2019, 9:01 PM IST

ಚಿಕ್ಕೋಡಿ: ಕಳೆದ ಅ.7 ರಂದು ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಹೋಗಿದ್ದ 13 ವರ್ಷದ ಬಾಲಕನೋರ್ವ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಇಂಗಳಗಾಂವ್​ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕನ ಶವ ದೊರೆತಿದೆ.

ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಶವವಾಗಿ ಪತ್ತೆ

ಪ್ರವಾಹ ಸಂದರ್ಭದಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬಸವರಾಜ್​ ಮಾಣಿಕ್​ ಕಾಂಬಳೆ (13) ಮೃತ ಬಾಲಕ.ಗದ್ದೆಯ ಮಾಲೀಕ ಅಶೋಕ್​ ಮಲ್ಲಗೌಡರ ಇಂದು ಮೇವು ತರಲು ಹೋದಾಗ ಕೊಳೆತ ವಾಸನೆ ಬರುತ್ತಿತ್ತು. ಸ್ಥಳ ಗಮನಿಸಿದಾಗ ಮೃತದೇಹ ಕಂಡು ಗಾಬರಿಯಾಗಿ ಗ್ರಾಮದ ಈ ವಿಷಯ ತಿಳಿಸಿದ್ದರು. ನಂತರ ಅದು ಗ್ರಾಮದ ಬಾಲಕ ಬಸವರಾಜ್​ನ ಮೃತದೇಹ ಅನ್ನೋದು ತಿಳಿದುಬಂದಿದೆ.

ಈ ಕುರಿತು ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

ABOUT THE AUTHOR

...view details