ಬೆಳಗಾವಿ: ರುಂಡ ಕತ್ತರಿಸಿದ ಅಪರಿಚಿತ ವ್ಯಕ್ತಿಯೊಬ್ಬರ ದೇಹ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಮುತಗಾ ಗ್ರಾಮದಲ್ಲಿ ನಡೆದಿದ್ದು, ಈ ಮೃತದೇಹ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಬೆಳಗಾವಿ ತಾಲೂಕಿನ ಮುತಗಾ-ಮುಚ್ಛಂಡಿ ಮಾರ್ಗಮಧ್ಯದಲ್ಲಿರುವ ಸುನೀಲ್ ಅಷ್ಟಗೇಕರ್ ಎಂಬುವವರಿಗೆ ಸೇರಿದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಬೆಳಗಾವಿ: ಬಾವಿಯಲ್ಲಿ ರುಂಡವಿಲ್ಲದ ಮನುಷ್ಯನ ದೇಹ ಪತ್ತೆ - ಬಾವಿಯಲ್ಲಿ ಪತ್ತೆಯಾಯಿತು ರುಂಡವಿಲ್ಲದ ದೇಹ
ರುಂಡ ಕತ್ತರಿಸಿದ ಅಪರಿಚಿತ ವ್ಯಕ್ತಿಯ ದೇಹ ಬಾವಿಯಲ್ಲಿ ಪತ್ತೆ- ಬೆಳಗಾವಿ ಜಿಲ್ಲೆಯ ಮುತಗಾ ಗ್ರಾಮದಲ್ಲಿ ಘಟನೆ- ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ
ಬಾವಿಯಲ್ಲಿ ಪತ್ತೆಯಾಯಿತು ರುಂಡವಿಲ್ಲದ ಮನುಷ್ಯನ ದೇಹ
ಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರುಂಡ ಇಲ್ಲದ ದೇಹ 35 ವರ್ಷದ ಅಪರಿಚಿತ ವ್ಯಕ್ತಿಯದ್ದು ಎಂದು ಅಂದಾಜಿಸಲಾಗಿದೆ. ಯಾರೋ ಕೊಲೆಗೈದು ಬಾವಿಯಲ್ಲಿ ಬೀಸಾಕಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪ್ರೇಮ ವಿವಾಹ, ರಾಜಕೀಯ ದ್ವೇಷ: ಗ್ರಾ.ಪಂ ಸದಸ್ಯನ ಭೀಕರ ಹತ್ಯೆ