ಬೆಳಗಾವಿ:ನಾಳೆಯ ವೀಕೆಂಡ್ ಲಾಕ್ಡೌನ್ನಲ್ಲಿ ಅನಗತ್ಯವಾಗಿ ಓಡಾಡುವವರು ಸಿಕ್ಕಿಹಾಕಿಕೊಂಡ್ರೆ ಬೈಕ್ ಸೀಜ್ ಮಾಡುವುದಲ್ಲದೇ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸುತ್ತೇವೆ ಎಂದು ಡಿಸಿಪಿ ಡಾ. ವಿಕ್ರಮ ಆಮಟೆ ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀಕೆಂಡ್ ಲಾಕ್ಡೌನ್ ಉದ್ದೇಶ ಕೋವಿಡ್ ಸೋಂಕು ತಡೆಗಟ್ಟುವ ಸಲುವಾಗಿ ಎಂಬುವುದು ಸಾರ್ವಜನಿಕರೂ ಅರ್ಥ ಮಾಡಿಕೊಳ್ಳಬೇಕು. ನಾಳೆ ಮತ್ತು ನಾಡಿದ್ದು ಯಾರು ಅನಗತ್ಯವಾಗಿ ರಸ್ತೆಗಳಿಗೆ ಬರುತ್ತಾರೋ ಅಂಥವರ ಬೈಕ್ ಸೀಜ್ ಮಾಡುವುದಲ್ಲದೇ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸುತ್ತೇವೆ. 10 ಗಂಟೆ ನಂತರವೂ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಜನರು ಹೊರಗಡೆ ಬರುತ್ತಿದ್ದಾರೆ. ಕೊರೊನಾ ಪರಿಸ್ಥಿತಿಯನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದರು.