ಅಥಣಿ: ಉತ್ತರ ಕರ್ನಾಟಕಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮಲತಾಯಿ ಧೋರಣೆ ತೋರಿಸಿದ್ದರಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಮಲತಾಯಿ ಧೋರಣೆಯಿಂದ ಸಮ್ಮಿಶ್ರ ಸರ್ಕಾರ ಪತನವಾಗಿದೆ : ಡಿಸಿಎಂ - DCM Savadi Talk Against To Former CM Kumaraswamy
ಉತ್ತರ ಕರ್ನಾಟಕಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮಲತಾಯಿ ಧೋರಣೆ ತೋರಿಸಿದ್ದರಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಆಕ್ರೋಶ ವ್ಯಕ್ತಪಡಿಸಿದರು
ಅಥಣಿ ಪ್ರಚಾರದಲ್ಲಿ ಮಾತನಾಡಿದ ಸವದಿ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಕುಮಾರಸ್ವಾಮಿ ಯಾವ ರೀತಿ ಸರ್ಕಾರ ಮಾಡುತ್ತಾರೆಂದು ನಾವು ಕಾಯುತ್ತಿದ್ದೇವಿ. ರಾಜ್ಯದ ಮುಖ್ಯಮಂತ್ರಿ ಆದರು ಇಡಿ ರಾಜ್ಯ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಮಾಡಬೇಕು. ಆದರೆ ಕುಮಾರಸ್ವಾಮಿ ಮಂಡ್ಯ, ಮೈಸೂರು, ರಾಮನಗರ ಹಾಗೂ ಹಾಸನ ಜಿಲ್ಲೆಗಳ ಮುಖ್ಯಮಂತ್ರಿಯಾಗಿ 12 ತಿಂಗಳು ಕಾರ್ಯನಿರ್ವಹಿಸಿದ್ದರು.
ಬೇರೆ ಜಿಲ್ಲೆಯಗಳಿಗೆ ಅನುದಾನ ಕೊಡಲಿಲ್ಲ. ಅದರಲ್ಲೂ ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದೆ ಇರುವುದಕ್ಕೆ 17 ಜನ ಶಾಸಕರು ರಾಜೀನಾಮೆ ನೀಡಿದ್ದರು. ಇದರಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವಂತಾಯಿತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆರೋಪದ ಸುರಿಮಳೆ ಸುರಿಸಿದ್ದರು.