ಕರ್ನಾಟಕ

karnataka

ETV Bharat / state

ಸಾರಿಗೆ ಇಲಾಖೆ ನೌಕರರು ಪ್ರತಿಭಟನೆ ಕೈ ಬಿಡುವಂತೆ ಡಿಸಿಎಂ ಸವದಿ ಮನವಿ - DCM Savadi appeals to Transport Department employees

ಸಮಸ್ಯೆಗಳಿಗೆ ಪ್ರತಿಭಟನೆ ಒಂದೇ ಮಾರ್ಗವಲ್ಲ. ಸರ್ಕಾರ ಸಾರಿಗೆ ನೌಕರರ ಪರ ಇರುವುದು. ಸಾರಿಗೆ ಇಲಾಖೆ ನೌಕರರಿಗೆ ಸದ್ಯದಲ್ಲೇ 6ನೇ ವೇತನ ಆಯೋಗ ಜಾರಿ ಮಾಡಲಾಗುವುದು..

DCM Laxman Savadi
ಡಿಸಿಎಂ ಲಕ್ಷ್ಮಣ್​​ ಸವದಿ

By

Published : Mar 27, 2021, 6:19 PM IST

ಅಥಣಿ :ಏಪ್ರಿಲ್‌ 7ರಂದು ಸಾರಿಗೆ ನೌಕರರು ಪ್ರತಿಭಟನೆ ನಡೆಸುವುದಾಗಿ ಈಗಾಗಲೇ ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ನಡೆಸದಂತೆ ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್​​ ಸವದಿ ಸಾರಿಗೆ ನೌಕರರಿಗೆ ಮನವಿ ಮಾಡಿದ್ದಾರೆ.

ಸಾರಿಗೆ ಇಲಾಖೆ ನೌಕರರು ಪ್ರತಿಭಟನೆ ಕೈ ಬಿಡುವಂತೆ ಡಿಸಿಎಂ ಸವದಿ ಮನವಿ

ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಸಾರಿಗೆ ನೌಕರರ ಹಲವು ಬೇಡಿಕೆ ಈಡೇರಿಸಿದೆ. ಸಾರಿಗೆ ನೌಕರ ಪ್ರಮುಖ 9 ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕ ತೊಂದರೆಯುಂಟು ಮಾಡುವ ಕಾರ್ಯಕ್ಕೆ ಮುಂದಾಗಬೇಡಿ.

ಸಮಸ್ಯೆಗಳಿಗೆ ಪ್ರತಿಭಟನೆ ಒಂದೇ ಮಾರ್ಗವಲ್ಲ. ಸರ್ಕಾರ ಸಾರಿಗೆ ನೌಕರರ ಪರ ಇರುವುದು. ಸಾರಿಗೆ ಇಲಾಖೆ ನೌಕರರಿಗೆ ಸದ್ಯದಲ್ಲೇ 6ನೇ ವೇತನ ಆಯೋಗ ಜಾರಿ ಮಾಡಲಾಗುವುದು ಎಂದು ಡಿಸಿಎಂ ಲಕ್ಷ್ಮಣ್​​ ಸವದಿ ತಿಳಿಸಿದರು.

ಓದಿ:ಬೇಡಿಕೆ ಆಲಿಸಲು ಸಿದ್ಧ, ಮುಷ್ಕರ ನಿಲ್ಲಿಸುವಂತೆ ಸಾರಿಗೆ ನೌಕರರಿಗೆ ಡಿಸಿಎಂ ಸವದಿ ಮನವಿ

ABOUT THE AUTHOR

...view details