ಕರ್ನಾಟಕ

karnataka

By

Published : Aug 10, 2020, 12:35 PM IST

ETV Bharat / state

ಎಪಿಎಂಸಿ & ಭೂಸುಧಾರಣೆ ಕಾಯ್ದೆಯನ್ನು ರೈತರು ವಿರೋಧಿಸುತ್ತಿಲ್ಲ: ಕಾಂಗ್ರೆಸ್​ ವಿರುದ್ಧ  ಡಿಸಿಎಂ ಸಿಡಿಮಿಡಿ

ಎಪಿಎಂಸಿ ಮತ್ತು ಭೂಸುಧಾರಣೆ ಕಾಯ್ದೆಯನ್ನು ರೈತರು ವಿರೋಧಿಸುತ್ತಿಲ್ಲ. ಕಾಂಗ್ರೆಸ್​ ಪಕ್ಷ ವಿರೋಧಿಸುತ್ತಿದೆ ಎಂದು ಡಿಸಿಎಂ ಲಕ್ಷ್ಮಣ್​ ಸವದಿ ಆಕ್ರೋಶ ವ್ಯಕ್ತಪಡಿಸಿದರು.

APMC Privatization, DCM Laxman Savadi reaction on APMC Privatization, DCM Laxman Savadi, DCM Laxman Savadi news, APMC Privatization news, APMC Privatization latest news, ಎಪಿಎಂಸಿ ಖಾಸಗೀಕರಣ, ಎಪಿಎಂಸಿ ಖಾಸಗೀಕರಣ ಬಗ್ಗೆ ಡಿಸಿಎಂ ಲಕ್ಷ್ಮಣ್​ ಸವದಿ ಪ್ರತಿಕ್ರಿಯೆ, ಡಿಸಿಎಂ ಲಕ್ಷ್ಮಣ್​ ಸವದಿ, ಡಿಸಿಎಂ ಲಕ್ಷ್ಮಣ್​ ಸವದಿ ಸುದ್ದಿ, ಎಪಿಎಂಸಿ ಖಾಸಗೀಕರಣ ಸುದ್ದಿ,
ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಡಿಸಿಎಂ

ಅಥಣಿ (ಬೆಳಗಾವಿ): ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೃಷಿ ಇಲಾಖೆಯ ಕಚೇರಿಯ ಹೊಸ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಡಿಸಿಎಂ ಲಕ್ಷಣ ಸವದಿ, ಸರ್ಕಾರ ಜಾರಿಗೆ ತಂದಿರುವ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು.

ಎಪಿಎಂಸಿ ಮತ್ತು ಭೂಸುಧಾರಣೆ ಕಾಯ್ದೆಯನ್ನು ರೈತರು ವಿರೋಧಿಸುತ್ತಿಲ್ಲ ಎಂದು ಲಕ್ಷ್ಮಣ್​ ಸವದಿ ಹೇಳಿದರು.

ಎಪಿಎಂಸಿ ಕಾಯ್ದೆ ಯಾರಿಗೂ ಮಾರಕವಲ್ಲ. ರೈತರಿಗೆ ತಾವು ಬೆಳೆದ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ದಿಗ್ಬಂಧನ ಮುಕ್ತಿಯಾಗಿದೆ. ಎಪಿಎಂಸಿ ಖಾಸಗೀಕರಣ ಮಾಡುವುದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಸೂಕ್ತ ಬೆಳೆಯಲ್ಲಿ ಮಾರಾಟ ಮಾಡಬಹುದಾಗಿದೆ ಎಂದರು.

ರೈತರು ತಮ್ಮ ಬೆಳೆದ ಫಸಲನ್ನು ಎಲ್ಲಿ ಬೇಕಾದರೂ ಮುಕ್ತವಾಗಿ ಮಾರಾಟ ಮಾಡಬಹುದು. ಖಾಸಗೀಕರಣಕ್ಕೆ ವಿರೋಧ ಪಕ್ಷದವರು ವಿರೋಧ ಮಾಡುತ್ತಿದ್ದಾರೆ. ಎಪಿಎಂಸಿ ಖಾಸಗೀಕರಣ ಮಾಡಿರುವುದು ರೈತರು ವಿರೋಧ ಮಾಡ್ತಿಲ್ಲ ಎಂದು ಇದೇ ವೇಳೆ ಡಿಸಿಎಂ ಲಕ್ಷ್ಮಣ್​ ಸವದಿ ತಿಳಿಸಿದರು.

ಇನ್ನು ಭೂಸುಧಾರಣೆ ಕಾಯ್ದೆ ತಿದ್ದುಪಡಿಗೂ ರೈತರು ವಿರೋಧ ಮಾಡುತ್ತಿಲ್ಲ. ಪ್ರತಿಪಕ್ಷಗಳು ಮಾತ್ರ ವಿರೋಧ ಮಾಡುತ್ತಿವೆ. ಒಕ್ಕಲುತನದಿಂದ ಸಮಾಜ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಔದ್ಯೋಗಿಕರಣ ಕ್ರಾಂತಿಯಿಂದ ರೈತರ ಹಿತಾಸಕ್ತಿ ಕಾಪಾಡುತ್ತದೆ. ಈ ಎರಡು ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ಮಾರಕವಿಲ್ಲ ಎಂದು ಹೇಳಿದರು.

ಸಿಎಂ ಯಡಿಯೂರಪ್ಪ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬರುತ್ತಿದ್ದಾರೆ. ಇದು ಖುಷಿಯ ವಿಚಾರ. ಮತ್ತೆ ರಾಜ್ಯದ ಜನರ ಕೆಲಸ ಮಾಡಲು ಅಣಿಯಾಗಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಕಳೆದ ಬಾರಿ ಕೃಷ್ಣಾ ನದಿ ಪ್ರವಾಹದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ವಿಳಂಬಕ್ಕೆ ಪ್ರತಿಕ್ರಿಯೆ ನೀಡಿ, ಪ್ರತಿಶತ 60ರಷ್ಟು ನೆರೆ ಸಂತ್ರಸ್ತರಿಗೆ ಪರಿಹಾರ ಮುಟ್ಟಿದ್ದೆ. ನೆರೆ ಸಂತ್ರಸ್ತರಿಗೆ ಸ್ಥಳಾಂತರ ಹಾಗೂ ಮನೆ ಪರಿಹಾರ ಕೊಡುವುದು ಪ್ರಗತಿಯಲ್ಲಿದೆ. ಕೊರೊನಾದಿಂದ ವಿಳಂಬವಾಗಿದೆ ಮುಂದಿನ ದಿನಗಳಲ್ಲಿ ಪರಿಹಾರ ಸಿಗುತ್ತದೆ ಎಂಬ ಭರವಸೆ ನೀಡಿದರು.

ABOUT THE AUTHOR

...view details