ಕರ್ನಾಟಕ

karnataka

ETV Bharat / state

ತೈಲೆ ಬೆಲೆ ಏರಿಕೆ ಪರಿಣಾಮ ಬೀರಲ್ಲ, ಬೆಳಗಾವಿ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಗೆಲ್ಲುತ್ತೆ- ಡಿಸಿಎಂ ಸವದಿ - DCM Laxman Savadi on Belagavi by election

ವಿಧಾನಸಭಾ ಉಪಚುನಾವಣೆ ರಾಜ್ಯ ಸರ್ಕಾರ ಕೆಲಸದ ಮೇಲೆ ನಡೆಯುತ್ತೆ. ಇದರಿಂದಾಗಿ ಬೆಳಗಾವಿ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಪ್ರಮುಖವಾಗಿದೆ. ಸದ್ಯದ ತೈಲ ಬೆಲೆ ಏರಿಕೆ ಸಹ ಬಿಜೆಪಿ ಸರ್ಕಾರ ಮೇಲೆ ಪರಿಣಾಮ ಬೀರುವುದಿಲ್ಲ..

DCM Laxman Savadi on Belagavi by election
ಡಿಸಿಎಂ ಸವದಿ

By

Published : Mar 13, 2021, 3:01 PM IST

ಅಥಣಿ (ಬೆಳಗಾವಿ):ರಾಜ್ಯದ ನಾಲ್ಕು ಕ್ಷೇತ್ರಗಳಿಗೆ ಉಪ ಚುನಾವಣೆಗೆ ಈ ತಿಂಗಳು ಕೊನೆಯಲ್ಲಿ ದಿನಾಂಕ ಘೋಷಣೆ ಆಗುವ ನಿರೀಕ್ಷೆಯಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ದಿನಾಂಕವನ್ನು ಈಗಾಗಲೇ ಘೋಷಿಸಿದ್ದಾರೆ. ನಮ್ಮ ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಈ ತಿಂಗಳ ಕೊನೆಯಲ್ಲಿ ದಿನಾಂಕ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಿದರು.

ಇದನ್ನೂ ಓದಿ:ಮಂಡ್ಯದಲ್ಲಿ ಸಚಿವ ಸಿ.ಪಿ. ಯೋಗೇಶ್ವರ್ ಸಭೆ; ಸ್ಥಳೀಯ ಶಾಸಕರಿಗೇ ಆಹ್ವಾ‌ನ ನೀಡಿಲ್ಲವಂತೆ!

ಬೆಳಗಾವಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಚುನಾವಣೆ ಸ್ಪರ್ಧೆ ಮಾಡಿದರೂ ನಾಲ್ಕು ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆಯಾಗುತ್ತಾರೆ. ದೇಶದಲ್ಲಿ ಮೋದಿ ಅಲೆ ಇರುವುದರಿಂದ ಬೆಳಗಾವಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ. ಲೋಕಸಭೆ ಚುನಾವಣೆ ನಡೆಯುವುದು ನರೇಂದ್ರ ಮೋದಿ ಸರ್ಕಾರದ ಆಡಳಿತದ ಮೆಚ್ಚುಗೆ ಮೇಲೆ.

ವಿಧಾನಸಭಾ ಉಪಚುನಾವಣೆ ರಾಜ್ಯ ಸರ್ಕಾರ ಕೆಲಸದ ಮೇಲೆ ನಡೆಯುತ್ತೆ. ಇದರಿಂದಾಗಿ ಬೆಳಗಾವಿ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಪ್ರಮುಖವಾಗಿದೆ. ಸದ್ಯದ ತೈಲ ಬೆಲೆ ಏರಿಕೆ ಸಹ ಬಿಜೆಪಿ ಸರ್ಕಾರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details