ಕರ್ನಾಟಕ

karnataka

ETV Bharat / state

ಸಿಎಂ ಭೇಟಿ ಮಾಡಿದ್ದ ಸವದಿ: ಕ್ವಾರಂಟೈನ್ ಆಗಲ್ಲವೆಂದ್ರು ಡಿಸಿಎಂ...! - Chief Minister Yeddyurappa

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರು ತಮ್ಮೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್​ ಆಗುವಂತೆ ಕೇಳಿಕೊಂಡಿದ್ದಾರೆ. ನಾನು ಇತ್ತೀಚೆಗೆ ಅವರನ್ನು ಭೇಟಿಯಾಗಿದ್ದರೂ ಸಹ ಸಾಕಷ್ಟು ಅಂತರ ಕಾಯ್ದುಕೊಂಡಿದ್ದೆ. ಹೀಗಾಗಿ ನಾನು ಕ್ವಾರಂಟೈನ್​ ಆಗುವುದಿಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.

DCM Laxman Savadi is not ready for quarantine
ಸಿಎಂಗೆ ಕೊರೊನಾ ಬಂದಿದ್ದಕ್ಕೆ ನಾನು ಕ್ವಾರೆಂಟೈನ್ ಆಗಲ್ಲ: ಡಿಸಿಎಂ ಲಕ್ಷ್ಮಣ್ ಸವದಿ

By

Published : Aug 3, 2020, 3:52 PM IST

Updated : Aug 3, 2020, 10:05 PM IST

ಅಥಣಿ(ಬೆಳಗಾವಿ): ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರು ತಮ್ಮೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್​ ಆಗುವಂತೆ ಹೇಳಿದ್ದಾರೆ. ನಾನು ದೆಹಲಿಯಿಂದ ರಾಜ್ಯಕ್ಕೆ ಮರಳಿದಾಗ ಅವರನ್ನು ಭೇಟಿಯಾಗಿದ್ದೆ. ಆದ್ರೆ ನಮ್ಮಿಬ್ಬರ ನಡುವೆ ಸಾಕಷ್ಟು ಅಂತರ ಕಾಯ್ದುಕೊಂಡಿದ್ದೆವು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ.

ಸಿಎಂಗೆ ಕೊರೊನಾ ಬಂದಿದ್ದಕ್ಕೆ ನಾನು ಕ್ವಾರೆಂಟೈನ್ ಆಗಲ್ಲ: ಡಿಸಿಎಂ ಲಕ್ಷ್ಮಣ್ ಸವದಿ

ಅಥಣಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದ ಕೊರೊನಾ ನಿಯಂತ್ರಣದಲ್ಲಿ ಸಿಎಂ ಪಾತ್ರ ಬಹುಮುಖ್ಯ. ಹೀಗಾಗಿ ಆದಷ್ಟು ಬೇಗ ಅವರು ಗುಣಮುಖರಾಗಿ ಕಾರ್ಯೋನ್ಮುಖರಾಗಲಿ. ದೇವರು ಅವರಿಗೆ ಆರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ನಾನು ದೆಹಲಿಗೆ ಹೋಗಿಬಂದ ವಿಚಾರವನ್ನು ಮುಖ್ಯಮಂತ್ರಿ ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ತಿಳಿಸಿದ್ದೇನೆ. ಹೀಗಾಗಿ ನಾನು ಕ್ವಾರೆಂಟೈನ್ ಆಗುವ ಅಗತ್ಯವಿಲ್ಲ. ಆಗುವುದೂ ಇಲ್ಲ ಎಂದರು.

ಮುಂದಿನ ಸಿಎಂ ಲಕ್ಷ್ಮಣ್ ಸವದಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ, ಅವರವರ ಅಭಿಪ್ರಾಯಗಳನ್ನು ಜನ ಹಂಚಿಕೊಂಡಿದ್ದಾರೆ. ಇಂತ ಊಹಾಪೋಹಗಳಿಗೆ ಕಿವಿಗೊಡಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವದಂತಿಗಳನ್ನು ಹರಿಬಿಡಬಾರದರು ಎಂದು​ ಅಭಿಮಾನಿಗಳಿಗೆ ಮನವಿ ಮಾಡಿದರು.

Last Updated : Aug 3, 2020, 10:05 PM IST

ABOUT THE AUTHOR

...view details