ಕರ್ನಾಟಕ

karnataka

ETV Bharat / state

ಕೊರೊನಾ ಕಾಲದಲ್ಲಿ 1 ಲಕ್ಷ ಮಂದಿಗೆ ದಿನಸಿ ಕಿಟ್ ವಿತರಿಸಿದ ಡಿಸಿಎಂ ಸವದಿ

ಕೋವಿಡ್‌ ಎರಡನೇ ಅಲೆ ಅಬ್ಬರದಿಂದಾಗಿ ಜನಸಾಮಾನ್ಯರು ಪ್ರಾಣದ ರಕ್ಷಣೆಗೆ ಪರದಾಡುತ್ತಿದ್ದು ಡಿಸಿಎಂ ಸವದಿ ಬಡವರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದರು.

By

Published : Jun 24, 2021, 10:55 AM IST

DCM Laxman Savadi
DCM Laxman Savadi

ಅಥಣಿ(ಬೆಳಗಾವಿ):ಅಥಣಿ ತಾಲೂಕಿನ ಜನರಿಗೆ ಒಂದು ತಿಂಗಳಿಗೆ ಆಗುವಷ್ಟು ರೇಶನ್ ಕಿಟ್‌ಗಳನ್ನು ಸವದಿ ಕುಟುಂಬದ ವತಿಯಿಂದ ವಿತರಿಸಲಾಗಿದೆ.

ಅಥಣಿ ಜನತೆಗೆ ಡಿಸಿಎಂ ಸವದಿ ಆಹಾರ ಕಿಟ್‌ ವಿತರಣೆ

ಲಕ್ಷ್ಮಣ ಸವದಿ ತಂದೆ ತಾಯಿಯ ಹೆಸರಿನಲ್ಲಿ ಸತ್ಯ ಸೇವಾ ಸಂಗಮ ಟ್ರಸ್ಟ್ ವತಿಯಿಂದ ತಾಲೂಕಿನ ಒಂದು ಲಕ್ಷ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ ಪದಾರ್ಥಗಳನ್ನು ಕಳೆದ ಇಪ್ಪತ್ತು ದಿನಗಳಿಂದ ತಾಲೂಕಿನ ಪ್ರತಿ ಗ್ರಾಮಕ್ಕೆ ತೆರಳಿ ವಿತರಣೆ ಮಾಡಲಾಗುತ್ತಿದೆ.

ಕೊರೊನಾ ಉಲ್ಬಣದಿಂದ ಆಮ್ಲಜನಕ ಸರಿಯಾದ ರೀತಿಯಲ್ಲಿ ಪೂರೈಕೆ ಆಗದ ಸಮಯದಲ್ಲಿ ಸಚಿವ ಸವದಿ 50 ಲಕ್ಷ ರೂಪಾಯಿ ಖರ್ಚು ಮಾಡಿ 50 ಆಕ್ಸಿಜನ್ ಕಾನ್ಸನ್​ಟ್ರೇಟರ್ ವಿತರಣೆ ಮಾಡಿದ್ದರು. ಭಗವಂತ ಸಂಪತ್ತು ಕೊಟ್ಟಾಗ, ಅದನ್ನು ಸ್ವಂತಕ್ಕೆ ಭೋಗಿಸಬಾರದು, ಸಮಾಜದ ಪ್ರತಿನಿಧಿಯಾಗಿ ಜನರ ಕಷ್ಟ ಆಲಿಸುವುದು ನನ್ನ ಧರ್ಮ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಇದನ್ನೂ ಓದಿ:ಕೋವಿಡ್ 3ನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಎಲ್ಲಾ ಸಿದ್ಧತೆಯಾಗಿದೆ : ಸಚಿವೆ ಶಶಿಕಲಾ ಜೊಲ್ಲೆ

For All Latest Updates

ABOUT THE AUTHOR

...view details