ಕರ್ನಾಟಕ

karnataka

ETV Bharat / state

ಅಥಣಿ : ಹಸಿರುಕರಣ ಯೋಜನೆಗೆ ಚಾಲನೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ

ಯುವ ಪೀಳಿಗೆಗೆ ಗಿಡ,ಮರ,ಪರಿಸರ ತನ್ನದೆನ್ನುವ ಆತ್ಮೀಯ ಭಾವ, ಸ್ಪರ್ಶವನ್ನು ಬಿತ್ತುವ ಮಹೋದ್ದೇಶದಿಂದ ವನ ಮಹೋತ್ಸವದ ಆಚರಣೆ ಮಾಡಲಾಗುತ್ತದೆ. ಪ್ರಕೃತಿಯ ನಾಶಕ್ಕೆ ಮನುಷ್ಯನ ಕೃತ್ಯಗಳು ಹೇಗೆ ಕಾರಣವಾಗುತ್ತವೆಯೋ, ಹಾಗೆಯೇ ಪ್ರಕೃತಿ,ಪರಿಸರದ ರಕ್ಷಣೆಗೆ ಮಾನವನೇ ಮುಂದಾಗಬೇಕು ಎಂದರು.

Athani
Athani

By

Published : Jun 19, 2020, 9:11 PM IST

ಅಥಣಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಗರ ಹಸಿರುಕರಣ ಯೋಜನೆ ವನಮಹೊತ್ಸವ ಕಾರ್ಯಕ್ರಮವನ್ನ ಗಿಡಕ್ಕೆ ನೀರುಣಿಸುವ ಮೂಲಕ ಡಿಸಿಎಂ ಲಕ್ಷ್ಮಣ ಸವದಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಒಂದು ಗಿಡವನ್ನು ನೆಟ್ಟು ಬೆಳೆಸಿದರೆ ಒಂದು ಜೀವ ಉಳಿಸಿದಂತೆ. ಒಂದು ಮರ ಕಡಿದರೆ ಹಲವು ಜೀವನಾಶ ಮಾಡಿದಂತೆ ಎಂಬ ಮಾತು ಸತ್ಯ. ಊರಿಗೊಂದು ವನ,ಮನೆಗೊಂದು ಗಿಡ ಇದ್ರೆ ಉಲ್ಲಾಸಕರ ವಾತಾವರಣವಿರುತ್ತದೆ. ಸಂಪತ್ತು ಒಂದು ಕಾಲಕ್ಕೆ ಮುಗಿಯದ ಅಕ್ಷಯ ಪಾತ್ರೆಯಂತೆ ಇತ್ತು. ಇಂತಹ ಅಕ್ಷಯ ಭಂಡಾರ ಕ್ಷಯವಾಗದಂತೆ ಮುಂದಿನ ಪೀಳಿಗೆಗೆ ಇದನ್ನು ಉಳಿಸುವ ಕರ್ತವ್ಯ ನಮ್ಮದಾಗಿದೆ ಎಂದರು.

ಯುವ ಪೀಳಿಗೆಗೆ ಗಿಡ,ಮರ,ಪರಿಸರ ತನ್ನದೆನ್ನುವ ಆತ್ಮೀಯ ಭಾವ, ಸ್ಪರ್ಶವನ್ನು ಬಿತ್ತುವ ಮಹೋದ್ದೇಶದಿಂದ ವನ ಮಹೋತ್ಸವದ ಆಚರಣೆ ಮಾಡಲಾಗುತ್ತದೆ. ಪ್ರಕೃತಿಯ ನಾಶಕ್ಕೆ ಮನುಷ್ಯನ ಕೃತ್ಯಗಳು ಹೇಗೆ ಕಾರಣವಾಗುತ್ತವೆಯೋ, ಹಾಗೆಯೇ ಪ್ರಕೃತಿ,ಪರಿಸರದ ರಕ್ಷಣೆಗೆ ಮಾನವನೇ ಮುಂದಾಗಬೇಕು ಎಂದರು. ಬಳಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ ಜೆ ಚಂದ್ರಶೇಖರ್ ಮಾತನಾಡಿ, ಮರ ಎಂಬುದು ಪ್ರಕೃತಿಯ ಅನನ್ಯ ಕೊಡುಗೆ. ಪ್ರಕೃತಿಯ ಉಳಿವು–ಮಾನವನ ಉಳಿವು. ಈ ಉದ್ದೇಶದಿಂದಲೇ ವನಮಹೋತ್ಸವ ಪ್ರಾರಂಭವಾಗಿದೆ ಎಂದರು. ಈ ವೇಳೆ ನಗರದ ಎಪಿಎಂಸಿ ಆವರಣ ಸೇರಿ ವಿವಿಧ ಕಚೇರಿಗಳ ಆವರಣಗಳಲ್ಲಿ ಗಿಡಗಳನ್ನು ನೆಡಲಾಯಿತು.

ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಘಟಪ್ರಭಾ ವಿಭಾಗದ ಸಿ ಜೆ ಚಂದ್ರಶೇಖರ್, ಸಹಾಯಕ ಅರಣ್ಯಾಧಿಕಾರಿ ಶಿವಾನಂದ ನಾಯಿಕ್ವಾಡಿ, ವಲಯ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ, ತಹಶೀಲ್ದಾರ್ ದುಂಡಪ್ಪ ಕೊಮಾರ, ಗ್ರೇಡ್ -2 ತಹಶೀಲ್ದಾರ್‌ ರಾಜಕುಮಾರ ಬುರ್ಲಿ, ಎಪಿಎಂಸಿ ಅಧ್ಯಕ್ಷ ಶ್ರೀಶೈಲ ದುಲಾರಿ,ಕಾರ್ಯದರ್ಶಿ ಬಿ ಎಸ್ ಬಾವಿಹಾಳ, ಡಿಎಸ್ಪಿ ಎಸ್ ವಿ ಗಿರೀಶ್, ಸಿಪಿಯು ಶಂಕರಗೌಡ ಬಸನಗೌಡ, ಅರಣ್ಯ ಇಲಾಖೆಯ ಸಿಬ್ಬಂದಿ, ಎಪಿಎಂಸಿ ಸಿಬ್ಬಂದಿ ಉಪಸ್ಥಿತರಿದ್ದರು.

ABOUT THE AUTHOR

...view details