ಅಥಣಿ(ಬೆಳಗಾವಿ): ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜನತಾ ದರ್ಶನ ನಡೆಸಿದ ಡಿಸಿಎಂ ಲಕ್ಷ್ಮಣ ಸವದಿ, ತಾಲೂಕಿನ ಜನರ ಕುಂದು ಕೊರತೆಗಳನ್ನು ಆಲಿಸಿದರು.
ಅಥಣಿ ಪ್ರವಾಸಿ ಮಂದಿರದಲ್ಲಿ ಲಕ್ಷ್ಮಣ ಸವದಿ ಜನತಾ ದರ್ಶನ: ಕುಂದುಕೊರತೆ ಆಲಿಸಿದ ಡಿಸಿಎಂ - ಅಥಣಿಯ ಪ್ರವಾಸಿ ಮಂದಿರ
ಕೊರೊನಾದಿಂದ ಕೆಲಸ ಕಳೆದುಕೊಂಡವರು, ನೆರೆ ಸಂತ್ರಸ್ತರು ವಿಶೇಷ ಚೇತನರು ಸೇರಿದಂತೆ ಹಲವರು ಜನತಾ ದರ್ಶನದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದರು.
ಲಕ್ಷ್ಮಣ ಸವದಿ
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಯಡಿಯೂರಪ್ಪ ಆಗಮನದ ಹಿನ್ನೆಲೆಯಲ್ಲಿ ರೈತರ ಮತ್ತು ಸಂತ್ರಸ್ತರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲಿದ್ದೇವೆ. ನಾಳೆಯ ದಿನ ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಯ ಅಧಿಕಾರಿಗಳ ಜೊತೆ ಸಮಾಲೋಚನೆ ಮತ್ತು ವೈಮಾನಿಕ ಸಮೀಕ್ಷೆ ನಡಸಲಿದ್ದು, ಸಂತ್ರಸ್ತರಿಗೆ ಮನೆ ಪರಿಹಾರ ಮತ್ತು ಶಾಶ್ವತ ಸ್ಥಳಾಂತರ ಸೇರಿದಂತೆ ಹಲವಾರು ವಿಷಯ ಚರ್ಚೆ ಮಾಡಲಾಗುವುದು ಎಂದರು.
ಕೊರೊನಾದಿಂದ ಕೆಲಸ ಕಳೆದುಕೊಂಡವರು, ನೆರೆ ಸಂತ್ರಸ್ತರು ವಿಶೇಷ ಚೇತನರು ಸೇರಿದಂತೆ ಹಲವರು ಜನತಾ ದರ್ಶನದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದರು.