ಅಥಣಿ/ಬೆಳಗಾವಿ:ಸಿಎಂ ಯಡಿಯೂರಪ್ಪ ರಾಜ್ಯಪಾಲರಾಗುತ್ತಾರೆ, ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ನೇಮಕವಾಗಲಿದ್ದಾರೆ ಎಂಬ ಮಾತುಗಳಿಗೆ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.
ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ ನಮ್ಮ ರಾಜಾಹುಲಿ ಬಿ.ಎಸ್. ಯಡಿಯೂರಪ್ಪ ರಾಜ್ಯಪಾಲರಾಗಲ್ಲ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ, ಎಂದು ಸ್ಪಷ್ಟನೆ ಡಿಸಿಎಂ ಸವದಿ ಹೇಳಿದ್ರು.
ವಿಧಾನಪರಿಷತ್ ಸದಸ್ಯರಾಗಿ ಮೊದಲಬಾರಿಗೆ ಅಥಣಿಗೆ ಆಗಮಿಸಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿ, ವಿಧಾನಸಭಾ ಸದಸ್ಯನಾದ ಮೇಲೆ ಮೊದಲ ಬಾರಿಗೆ ಅಥಣಿಗೆ ಬಂದಿದ್ದೇನೆ. ತಾಲೂಕಿನ ಜನತೆ ನನಗೆ ಅದ್ಭುತವಾಗಿ ಸ್ವಾಗತ ಕೋರಿದ್ದಾರೆ ಎಂದರು.
ಅಮೂಲ್ಯ ಲಿಯೋನ್ ಪಾಕಿಸ್ತಾನ ಜಿಂದಾಬಾದ್ ಎಂಬ ದೇಶದ್ರೋಹಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೇ ದೇಶದ್ರೋಹದ ವಾಖ್ಯಗಳನ್ನು ಹೇಳಿದರೂ ಅದು ಕಾನೂನು ಉಲ್ಲಂಘನೆ. ಯಾರೆ ತಪ್ಪು ಮಾಡಿದರೂ ಕಾನೂನು ಪ್ರಕಾರ ಅವರಿಗೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.