ಅಥಣಿ: ಕೊರೊವಾ ವ್ಯಾಕ್ಸಿನ್ ಅವನ್ನು ದೇಶಾದ್ಯಂತ ಹಂಚಿಕೆಗೆ ಇವತ್ತು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಬಹುನಿರೀಕ್ಷಿತ ಸ್ವದೇಶಿ ಕೋವ್ಯಾಕ್ಸಿನ್ ಬಂದಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.
ಅಥಣಿ ಪಟ್ಟಣದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಇನ್ಮೇಲೆ ಕೊರೊನಾ ಮಹಾಮಾರಿಗೆ ಹೆದರುವ ಅವಶ್ಯಕತೆ ಇಲ್ಲ. ದೇಶದ ಪ್ರಧಾನಿಯವರ ಸತತ ಪ್ರಯತ್ನದಿಂದ ಇದಕ್ಕೆ ಲಸಿಕೆ ಬಂದಿದೆ. ಲಸಿಕೆ ಸಿದ್ಧಪಡಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಹಾಮಾರಿ ತಡೆಯಲು ಮೋದಿಯವರ ಆಸಕ್ತಿಯಿಂದಲೇ ಇಷ್ಟು ಬೇಗನೆ ಕೋ ವ್ಯಾಕ್ಸಿನ್ ಬಂದಿದೆ. ಅದರಲ್ಲೂ ಭಾರತದ ಲಸಿಕೆ ವಿಶ್ವದಲ್ಲಿ ಕ್ರಾಂತಿ ಮಾಡಲಿದೆ ಎಂದು ಹೇಳಿದರು.
ಭಾರತದ ಕೊರಾನಾ ವ್ಯಾಕ್ಸಿನ್ ಪ್ರಪಂಚದಲ್ಲಿ ಕ್ರಾಂತಿ ಮಾಡಲಿದೆ: ಡಿಸಿಎಂ ಲಕ್ಷ್ಮಣ್ ಸವದಿ - dcm lakshman savadi reaction about yatnal allgation against vijeyendra
ಬಹುನಿರೀಕ್ಷಿತ ಸ್ವದೇಶಿ ಕೋವ್ಯಾಕ್ಸಿನ್ ಬಂದಿರುವುದರಿಂದ ತುಂಬಾ ಸಂತೋಷವಾಗಿದೆ ಲಸಿಕೆ ಸಿದ್ಧಪಡಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅಥಣಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಡಿಸಿಎಂ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ
TAGGED:
ಅಥಣಿ ಲೇಟೆಸ್ಟ್ ನ್ಯೂಸ್