ಬೆಳಗಾವಿ:ಇಲ್ಲಿನ ಸಂಗಮೇಶ್ವರ ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಉಪಹಾರ ಸೇವಿಸಿದ್ದಾರೆ.
ಬೆಳಗಾವಿ ಹಾಸ್ಟೆಲ್ಗೆ ಡಿಸಿಎಂ ದಿಢೀರ್ ಭೇಟಿ: ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದ ಕಾರಜೋಳ - dcm govinda karajola
ಬೆಳಗಾವಿಯ ಹಾಸ್ಟೆಲ್ಗೆ ದಿಢೀರನೆ ಭೇಟಿ ಕೊಟ್ಟ ಡಿಸಿಎಂ ಗೋವಿಂದ ಕಾರಜೋಳ, ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದ್ದಾರೆ.
ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದ ಕಾರಜೋಳ
ಹುಬ್ಬಳ್ಳಿಗೆ ತೆರಳುವ ಮುನ್ನ ದಿಢೀರ್ ವಸತಿ ನಿಲಯಕ್ಕೆ ತೆರಳಿದ ಅವರು, ಪಲಾವ್, ಸಾಂಬರ್ ತಿಂದು ಉತ್ತಮ ಆಹಾರ ನೀಡುತ್ತಿರುವ ಬಗ್ಗೆ ಹಾಸ್ಟೆಲ್ ಸಿಬ್ಬಂದಿಗೆ ಅಭಿನಂದಿಸಿದರು. ಬಳಿಕ ವಸತಿ ನಿಲಯದ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದರು.
ನಿರಂತರ ಮಳೆಗೆ ಹಾಸ್ಟೆಲ್ ಸೋರುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಸಚಿವರ ಬಳಿ ಅಳಲು ತೋಡಿಕೊಂಡರು. ಜಿಪಂ ಸಿಇಒ ಜೊತೆ ಫೋನ್ನಲ್ಲಿ ಮಾತನಾಡಿದ ಕಾರಜೋಳ, ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವಂತೆ ಸೂಚನೆ ನೀಡಿದರು. ಬಳಿಕ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿರುವ ಬಿಜೆಪಿ ಸಭೆಗೆ ತೆರಳಿದರು.