ಬೆಳಗಾವಿ :ಬಿಜೆಪಿ ಸರ್ಕಾರ ರಚನೆ ಮಾಡಲು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಹಾಗೂ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಬಿಜೆಪಿ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ-ಯೋಗೇಶ್ವರ್ ಪಾತ್ರ ಹೆಚ್ಚಿದೆ : ಬಾಲಚಂದ್ರ ಜಾರಕಿಹೊಳಿ ಅರಬಾವಿ ಪಟ್ಟಣದಲ್ಲಿ ಜಿಟಿಟಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಸಿಎಂ ಅವ್ರು ನನಗೆ ಶ್ರೀಕೃಷ್ಣ ಪರಮಾತ್ಮ ಅಂದಿದ್ದಾರೆ. ಆದ್ರೆ, ಇವತ್ತು ಎಲ್ಲರೂ ಹೇಳ್ತಾರೆ 17 ಜನ ಶಾಸಕರಿಂದ ಸರ್ಕಾರ ರಚನೆ ಆಗಿದೆ ಅಂತಾ. ಆದ್ರೆ, ಸರ್ಕಾರ ಅಂದ್ರೆ ಬಿಲ್ಡಿಂಗ್ ಇದ್ದ ಹಾಗೇ, ಅದನ್ನು ಕಟ್ಟಲು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹಾಗೂ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ನೆರವಾಗಿದ್ದಾರೆ.
ಈಗಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಈ ಇಬ್ಬರು ನಾಯಕರ ಶ್ರಮ ಬಹಳಷ್ಟಿದೆ. ಇವರಿಬ್ಬರು ಶ್ರೀಕೃಷ್ಣ ಪರಮ್ಮಾತನ ಹಾಗೇ ಬಿಜೆಪಿ ಸರ್ಕಾರ ತರಲು ಶ್ರಮ ಹಾಕಿದ್ದಾರೆ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರ ಸಹಕಾರದಿಂದ ಉತ್ತಮ ಸಂಸ್ಥೆ ಅರಬಾವಿಗೆ ದೊರಕಿದೆ. ಈ ಭಾಗದ ಬಡವರ, ರೈತರ ಮಕ್ಕಳು ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ಪಡೆದುಕೊಂಡು ಸಾಧನೆ ಮಾಡಬೇಕು.
ಉದ್ಯೋಗಕ್ಕೆ ಯುವಕರು ಅಲೆದಾಡುವಂತಹ ಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಅವಶ್ಯತೆ ಇದೆ. ಈ ನಿಟ್ಟಿನಲ್ಲಿ ಜಿಟಿಟಿಸಿ ಸಂಸ್ಥೆ ಕೆಲಸ ಮಾಡಲಿದ್ದು, ಈ ಭಾಗದ ಮಕ್ಕಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.