ಕರ್ನಾಟಕ

karnataka

ETV Bharat / state

ಗಡಿಯಲ್ಲಿ ಖೋಟಾನೋಟು ಜಾಲ ಬೇಧಿಸಿದ ಪೊಲೀಸರು - 2 ಲಕ್ಷ 33 ಸಾವಿರ ರೂಪಾಯಿ ನಕಲಿ ನೋಟು

ಬೆಳಗಾವಿಯ ಗಡಿಯಲ್ಲಿ ಹಬ್ಬಿಕೊಂಡಿದ್ದ ಖೋಟಾನೋಟು ಜಾಲವನ್ನು ಡಿಸಿಐಬಿ ಹಾಗೂ ಪೊಲೀಸರ ಕಾರ್ಯಾಚರಣೆಯ ಮೂಲಕ ಪತ್ತೆ‌ ಮಾಡಲಾಗಿದೆ.

ಖೋಟಾ ನೋಟು ಜಾಲ ಬೇಧಿಸುವಲ್ಲಿ ಸಫಲವಾಯ್ತು ಡಿಸಿಐಬಿ- ಪೊಲೀಸರ ಕಾರ್ಯಾಚರಣೆ

By

Published : Nov 14, 2019, 6:27 PM IST

ಚಿಕ್ಕೋಡಿ:ತಾಲೂಕಿನ ಗಡಿಯಲ್ಲಿ ಹಬ್ಬಿಕೊಂಡಿದ್ದ ಖೋಟಾನೋಟು ಜಾಲವನ್ನು ಡಿಸಿಐಬಿ ಹಾಗೂ ಪೊಲೀಸರ ಕಾರ್ಯಾಚರಣೆಯ ಮೂಲಕ ಪತ್ತೆ‌ ಮಾಡಲಾಗಿದೆ.

2 ಲಕ್ಷ 33 ಸಾವಿರ ರೂಪಾಯಿ ನಕಲಿ ನೋಟು ಪತ್ತೆಯಾಗಿದೆ. ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು, ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಖೋಟಾನೋಟು ಜಾಲ ಬೇಧಿಸಿದ ಪೊಲೀಸರು

ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಗ್ರಾಮದ ಪರಶುರಾಮ ನಾಯ್ಕ (22), ಜಲಾಲ ದರ್ಗಾವಾಲೆ (24) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಫಾರುಕ್​​ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಆರೋಪಿಗಳು ನಕಲಿ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದರು ಎನ್ನಲಾಗಿದ್ದು, ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details