ಕರ್ನಾಟಕ

karnataka

ETV Bharat / state

ಬೆಳಗಾವಿ ಗಡಿಭಾಗದ ಚೆಕ್ ಪೋಸ್ಟ್‌ಗಳಿಗೆ ಡಿಸಿ ಭೇಟಿ : ಕಟ್ಟುನಿಟ್ಟಿನ ತಪಾಸಣೆ ಮಾಡುವಂತೆ ಸೂಚನೆ - ಬೆಳಗಾವಿ ಗಡಿಭಾಗದ ಚೆಕ್ ಪೋಸ್ಟ್​​​​​ ಗಳಿಗೆ ಡಿಸಿ ಎಂ.ಜಿ.ಹಿರೇಮಠ ಭೇಟಿ

ಈಗಾಗಲೇ ಜಿಲ್ಲೆಯಲ್ಲಿ ಶೇ.100ರಷ್ಟು ಮೊದಲ ಡೋಸ್ ವ್ಯಾಕ್ಸಿನೇಷನ್‌ ಆಗಿದೆ. ಶೇ.85ರಷ್ಟು ಎರಡನೇ ಡೋಸ್ ವ್ಯಾಕ್ಸಿನೇಷನ್‌ ಆಗಿದೆ. ಇದರ ಜೊತೆಗೆ 15 ವರ್ಷ ಮೇಲ್ಪಟ್ಟ ಯುವಕ-ಯುವತಿಯರಿಗೆ ಶೇ.65ರಷ್ಟು ವ್ಯಾಕ್ಸಿನೇಷನ್‌ ಮಾಡಲಾಗಿದೆ..

ಬೆಳಗಾವಿ ಗಡಿಭಾಗದ ಚೆಕ್ ಪೋಸ್ಟ್​​​​​ ಗಳಿಗೆ ಡಿಸಿ ಭೇಟಿ
ಬೆಳಗಾವಿ ಗಡಿಭಾಗದ ಚೆಕ್ ಪೋಸ್ಟ್​​​​​ ಗಳಿಗೆ ಡಿಸಿ ಭೇಟಿ

By

Published : Jan 9, 2022, 3:26 PM IST

Updated : Jan 9, 2022, 4:25 PM IST

ಬೆಳಗಾವಿ :ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವ ಕಾಗವಾಡ ತಾಲೂಕಿನ ಚೆಕ್ ಪೋಸ್ಟ್​​​ಗಳಿಗೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಭೇಟಿ ನೀಡಿ ಭದ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಈ ವೇಳೆ ಚೆಕ್ ಪೋಸ್ಟ್‌ನಲ್ಲಿರುವ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡುವಂತೆ ಸೂಚಿಸಿದರು.

ಬೆಳಗಾವಿ ಗಡಿಭಾಗದ ಚೆಕ್ ಪೋಸ್ಟ್‌ಗಳಿಗೆ ಡಿಸಿ ಭೇಟಿ ನೀಡಿರುವುದು..

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕೋವಿಡ್ ಹಾಗೂ ಒಮಿಕ್ರಾನ್ ಸೋಂಕಿತ ಪ್ರಕರಣ ಹೆಚ್ಚಳವಾಗುತ್ತಿವೆ‌. ಹೀಗಾಗಿ, ಮಹಾರಾಷ್ಟ್ರದಿಂದ ಆಗಮಿಸುವ ಜನರ ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲ ಗಡಿಭಾಗದಲ್ಲಿ 23 ಚೆಕ್ ಪೋಸ್ಟ್​​​ಗಳನ್ನು ನಿರ್ಮಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಶೇ.100ರಷ್ಟು ಮೊದಲ ಡೋಸ್ ವ್ಯಾಕ್ಸಿನೇಷನ್‌ ಆಗಿದೆ. ಶೇ.85ರಷ್ಟು ಎರಡನೇ ಡೋಸ್ ವ್ಯಾಕ್ಸಿನೇಷನ್‌ ಆಗಿದೆ. ಇದರ ಜೊತೆಗೆ 15 ವರ್ಷ ಮೇಲ್ಪಟ್ಟ ಯುವಕ-ಯುವತಿಯರಿಗೆ ಶೇ.65ರಷ್ಟು ವ್ಯಾಕ್ಸಿನೇಷನ್‌ ಮಾಡಲಾಗಿದೆ.

ಸರ್ಕಾರದ ಆದೇಶದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬೂಸ್ಟರ್ ಡೋಸ್​​ ನೀಡುವ ಕೆಲಸ ಆರಂಭವಾಗಲಿದೆ ಎಂದರು. ಗ್ರಾಮೀಣ ಭಾಗದಲ್ಲಿ ಜನರ ಸಂಚಾರ ದಟ್ಟಣೆ, ಗುಂಪುಗೂಡುವಿಕೆ ಇಲ್ಲ. ಪಟ್ಟಣಗಳಲ್ಲೂ ಜನರು ವೀಕೆಂಡ್ ಕರ್ಫ್ಯೂ ಪಾಲಿಸುವ ಅಗತ್ಯತೆ ಇದೆ. ಜನರು ಸಹಕರಿಸಬೇಕು ಎಂದರು.

Last Updated : Jan 9, 2022, 4:25 PM IST

For All Latest Updates

TAGGED:

ABOUT THE AUTHOR

...view details