ಕರ್ನಾಟಕ

karnataka

ETV Bharat / state

ಕಬ್ಬಿನ ಬಾಕಿ ಬಿಲ್​​ ಪಾವತಿಯಲ್ಲಿ ನ್ಯೂನತೆ ಕಂಡು ಬಂದರೆ ಕಾನೂನು ಕ್ರಮ: ಬೆಳಗಾವಿ ಡಿಸಿ - DC MG Hiremath orders payment of sugarcane bill in Belgaum

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಇಳುವರಿಯನ್ನು ಕಡಿಮೆ ದಾಖಲಿಸಲಾಗುತ್ತಿದೆ ಎಂದು ರೈತರು ದೂರು ಹೇಳುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು ತಕ್ಷಣದಿಂದಲೇ ಕಾರ್ಖಾನೆ ಆವರಣದಲ್ಲಿ ಇಳುವರಿ ಮತ್ತು ಎಫ್​​ಆರ್‌ಪಿ ದರ ನಮೂದಿಸಿ ಸಾರ್ವಜನಿಕವಾಗಿ ಮಾಹಿತಿ ನೀಡಲೇಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶಿಸಿದ್ದಾರೆ.

dc-mg-hiremath-orders-payment-of-sugarcane-bill-in-belgaum
ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಪ್ರತಿನಿಧಿಗಳ ಸಭೆ

By

Published : Oct 17, 2020, 1:53 PM IST

ಬೆಳಗಾವಿ: ರೈತರಿಗೆ ಕಬ್ಬಿನ ಬಿಲ್ ಪಾವತಿ, ಸಾಗಣೆ ವೆಚ್ಚ, ತೂಕ ಮತ್ತು ಇಳುವರಿ ವಿಷಯದಲ್ಲಿ ನ್ಯೂನತೆ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಎಚ್ಚರಿಕೆ ನೀಡಿದ್ದಾರೆ.

ನಗರದ ಡಿಸಿ ಕಚೇರಿಯಲ್ಲಿ ಹಮ್ಮಿಕೊಂಡ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಬ್ಬಿನ ತೂಕ ಮತ್ತು ಇಳುವರಿ ವಿಷಯದಲ್ಲಿ ರೈತರಿಂದ ಸಾಕಷ್ಟು ದೂರುಗಳು ಬರುತ್ತಿವೆ. ತೂಕ ಮತ್ತು ಮಾಪನ ಇಲಾಖೆ ಅಧಿಕಾರಿಗಳು, ತಂಡ ರಚನೆ ಮಾಡಿ ಕಾರ್ಖಾನೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕಬ್ಬಿನ ತೂಕದ ಸಂಗತಿಯಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಡಿಸಿ ಎಂ.ಜಿ.ಹಿರೇಮಠ

ಪಕ್ಕದ ಮಹಾರಾಷ್ಟ್ರ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಇಳುವರಿಯನ್ನು ಕಡಿಮೆ ದಾಖಲಿಸಲಾಗುತ್ತಿದೆ ಎಂದು ರೈತರು ದೂರು ಹೇಳುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು ತಕ್ಷಣದಿಂದಲೇ ಕಾರ್ಖಾನೆ ಆವರಣದಲ್ಲಿ ಇಳುವರಿ ಮತ್ತು ಎಫ್​​ಆರ್‌ಪಿ ದರ ನಮೂದಿಸಿ ಸಾರ್ವಜನಿಕವಾಗಿ ಮಾಹಿತಿ ನೀಡಲೇಬೇಕು. ನಿಯಮದ ಪ್ರಕಾರ ಕಬ್ಬು ಸಾಗಿಸಿದ 14 ದಿನಗಳೊಳಗೆ ಬಿಲ್ ಪಾವತಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಬಾಕಿ ಬಿಲ್ ಪಾವತಿ: ಮಲಪ್ರಭಾ ಸಕ್ಕರೆ ಕಾರ್ಖಾನೆ ಕಬ್ಬಿನ ಬಿಲ್ ಬಾಕಿಯನ್ನು ಮುಂದಿನ ಹತ್ತು ದಿನಗಳಲ್ಲಿ ಪಾವತಿಸಲಾಗುವುದು. ಈಗಾಗಲೇ 20 ಕೋಟಿ ರೂ. ಸಾಲ ಮಂಜೂರಾಗಿದೆ ಎಂದು ಕಾರ್ಖಾನೆ ಪ್ರತಿನಿಧಿ ಮಾಹಿತಿ ನೀಡಿದರು. ಇದಲ್ಲದೆ ಉಗಾರ್ ಶುಗರ್ ಬಾಕಿ ಬಿಲ್ ಪಾವತಿಸಲಾಗಿದೆ ಎಂದು ಕಾರ್ಖಾನೆಯ ಪ್ರತಿನಿಧಿ ಮಾಹಿತಿ ನೀಡಿದರು. ಕಾರ್ಖಾನೆ ಪ್ರತಿನಿಧಿಗಳ ಮಾಹಿತಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಿಗದಿ ಮಾಡಿದ ಸಮಯದಲ್ಲಿ ಕೊಟ್ಟ ಮಾತಿನಂತೆ ಬಿಲ್ ಪಾವತಿಯಾಗಬೇಕು ಎಂದು ನಿರ್ದೇಶನ ನೀಡಿದರು.

ದರ ಘೋಷಿಸದಿದ್ದರೆ ಹೋರಾಟ: ಇದೇ ವೇಳೆ‌ ಸಭೆಯಲ್ಲಿ ಮಾತನಾಡಿದ ಕಬ್ಬು ಬೆಳೆಗಾರರು ಮತ್ತು ರೈತ ಮುಖಂಡರು, ಕಬ್ಬು ನುರಿಸುವ ಮೊದಲೇ ಎಫ್‌ಆರ್‌ಪಿ ಘೋಷಣೆ ಮಾಡಬೇಕೆಂದಿದ್ದರೂ ಜಿಲ್ಲೆಯ ಯಾವ ಸಕ್ಕರೆ ಕಾರ್ಖಾನೆಗಳೂ ದರ ಘೋಷಣೆ ಮಾಡುತ್ತಿಲ್ಲ. ಕಬ್ಬು ಕಟಾವು ಮತ್ತು ಸಾಗಣೆ ದರದಲ್ಲೂ ಭಾರೀ ಮೋಸ ನಡೆಯುತ್ತಿರುವುದನ್ನು ತಪ್ಪಿಸಬೇಕಾದರೆ ಆರಂಭದಲ್ಲೇ ಕಟಾವು ಮತ್ತು ಸಾಗಣೆ ದರ ಘೋಷಣೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸುವ ಅವಶ್ಯಕತೆ ಇದೆ. ಕಾರ್ಖಾನೆಗಳು ಸ್ಪಂದಿಸದಿದ್ದರೆ ಕಬ್ಬು ನುರಿಸಲು ಅವಕಾಶ ನೀಡದೆ ಚಳವಳಿ ಆರಂಭಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

For All Latest Updates

TAGGED:

ABOUT THE AUTHOR

...view details