ಕರ್ನಾಟಕ

karnataka

ETV Bharat / state

ಹೀಗಿರತೈತಿ ನೋಡ್ರಿ ಬೆಳಗಾವಿ ಮಂದಿ ದಸರಾ ಹಬ್ಬ!

ನಾಡಹಬ್ಬ ದಸರಾವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರಾದೇಶಿಕ ಸಂಪ್ರದಾಯಗಳಿಗೆ ತಕ್ಕಂತೆ ಆಯಾ ಜಿಲ್ಲೆ, ಊರುಗಳಲ್ಲಿ ಜನರು ವಿಭಿನ್ನವಾಗಿ ಸಂಭ್ರಮಿಸುತ್ತಾರೆ.

ಹೀಗರತೈತಿ ನೋಡ್ರಿ ಬೆಳಗಾವಿ ಮಂದಿ ದಸರಾ ಹಬ್ಬ.!

By

Published : Oct 8, 2019, 5:46 PM IST

ಬೆಳಗಾವಿ: ನಾಡಸಿರಿ ದಸರಾವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರಾದೇಶಿಕ ಸಂಪ್ರದಾಯಗಳಿಗೆ ತಕ್ಕಂತೆ ಆಯಾ ಜಿಲ್ಲೆ, ಊರುಗಳಲ್ಲಿ ವಿಭಿನ್ನವಾಗಿ ಸಂಭ್ರಮಿಸುತ್ತಾರೆ.

ಹೀಗಿರತೈತಿ ನೋಡ್ರಿ ಬೆಳಗಾವಿ ಮಂದಿ ದಸರಾ ಹಬ್ಬ.!

ಉತ್ತರಕರ್ನಾಟಕದ ಜವಾರಿ ಮಂದಿ ಇಂದು ವಿಶೇಷವಾಗಿ ಮನೆ-ಮನೆಗೆ ತೆರಳಿ ಬಂಗಾರ(ಬನ್ನಿ) ನೀಡಿ ಆಚರಿಸುತ್ತಾರೆ. ನಿನ್ನೆ ಖಂಡೆ ನವಮಿ ಅಂದರೆ ಆಯುಧ ಪೂಜೆಯ ದಿನ ಎಲ್ಲ ಶಸ್ತ್ರಾಸ್ತ್ರಗಳು, ವಾಹನಗಳು, ಕೃಷಿ ಉಪಕರಣಗಳು, ಯಂತ್ರಗಳು ಮತ್ತು ಲೋಹದ ವಸ್ತುಗಳನ್ನಿಟ್ಟು, ಬನ್ನಿ ಮರದ ಎಲೆಗಳು ಮತ್ತು ನವರಾತ್ರಿಯಲ್ಲಿ ಬೆಳೆಯುವ 'ಸಸಿ' ಯೊಂದಿಗೆ ಪೂಜಿಸುತ್ತಾರೆ.

ಹಳ್ಳಿಯಲ್ಲಿ ಬನ್ನಿ ಮರವನ್ನು ಪೂಜಿಸಿ ಬಳಿಕ ಅದರ ಎಲೆಗಳನ್ನು ಕಿತ್ತು, ಸಾಯಂಕಾಲದ ಹೊತ್ತಿನಲ್ಲಿ ಬನ್ನಿ ಎಲೆಗಳನ್ನು ಹಿರಿಯರಿಗೆ, ಕಿರಿಯರಿಗೆ, ಬಂಧು-ಬಾಂಧವರಿಗೆ ನೀಡಿ, ಬಂಗಾರ ತಗೊಂಡು ಬಂಗಾರದಂಗ ಬಾಳೋಣ ಎಂಬ ಸಂದೇಶ ರವಾನಿಸುತ್ತಾರೆ.

ABOUT THE AUTHOR

...view details