ಕರ್ನಾಟಕ

karnataka

ETV Bharat / state

ಹುಕ್ಕೇರಿ ಹಿರೇಮಠದಲ್ಲಿ ಈ ಬಾರಿ ದಸರಾ ಹಬ್ಬ ಆಚರಣೆಯಿಲ್ಲ: ಚಂದ್ರಶೇಖರ ಮಹಾಸ್ವಾಮಿ - hukkeri hirematt swamiji latest pressmeet

ಪ್ರತಿವರ್ಷ ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದ ಬೆಳಗಾವಿಯ ಹುಕ್ಕೇರಿ ಹಿರೇಮಠದ ದಸರಾ ಹಬ್ಬ ,ಕೊರೊನಾ ಹಿನ್ನೆಲೆ ಈ ಬಾರಿ ರದ್ದಾಗಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿ ತಿಳಿಸಿದ್ದಾರೆ.

Dasara celebration cancel this year in hukkeri hirematt
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾ ಸ್ವಾಮೀಜಿ

By

Published : Sep 30, 2020, 4:45 PM IST

ಚಿಕ್ಕೋಡಿ:ಕೊರೊನಾ‌ ಮಹಾಮಾರಿಯಿಂದ ಈ ಬಾರಿ ಹುಕ್ಕೇರಿ ಹಿರೇಮಠದಲ್ಲಿ ದಸರಾ ಹಬ್ಬ ಆಚರಿಸುವುದಿಲ್ಲ, ದಸರಾ ಉತ್ಸವವನ್ನು ಭಕ್ತರು ಮನೆಯಲ್ಲೇ ಭಕ್ತಿಯಿಂದ ಆಚರಿಸಿ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾ ಸ್ವಾಮೀಜಿ ಹೇಳಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾ ಸ್ವಾಮೀಜಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹುಕ್ಕೇರಿ ಹಿರೇಮಠದಲ್ಲಿ ಹನ್ನೊಂದು ದಿನಗಳವರಗೆ ಬಹಳ ವಿಜೃಂಭಣೆಯಿಂದ ದಸರಾ ಉತ್ಸವ ಆಚರಿಸಲಾಗುತ್ತಿತ್ತು. ಆದ್ರೆ ಈ ಬಾರಿ ಕೊರೊನಾ ವೈರಸ್ ಹಿನ್ನೆಲೆ ಅತಿ ಸರಳ ಉತ್ಸವ ಆಚರಿಸಲು ನಿರ್ಣಯಿಸಿದ್ದೇವೆ ಎಂದು ಸ್ವಾಮೀಜಿ ತಿಳಿಸಿದ್ರು.ಪ್ರತಿವರ್ಷ ಅದ್ಧೂರಿಯಾಗಿ ಆಚರಿಸುತ್ತಾ ಬಂದಿರುವ ದಸರಾ ಉತ್ಸವ ಕಳೆದ ಬಾರಿ ಅತಿವೃಷ್ಟಿಯಿಂದಾಗಿ ಸರಳವಾಗಿ ಆಚರಿಸಲ್ಪಟ್ಟಿತ್ತು. ಆದರೆ ಈ ಬಾರಿ ಮಾರಣಾಂತಿಕ ಕೋವಿಡ್​​ ವೈರಸ್ ಹಿನ್ನೆಲೆ ಸರ್ಕಾರದ ನಿಯಮಾನುಸಾರ ಕೇವಲ ಮಠದ ಪುರೋಹಿತರು ಸಾಂಪ್ರದಾಯಕ ಪೂಜಾ ಅನುಷ್ಠಾನಗಳನ್ನು ಮಾಡಲಿದ್ದಾರೆ. ಹೀಗಾಗಿ ಭಕ್ತರು ಮನೆಯಲ್ಲೇ ಉಳಿದು ದಸರಾ ಉತ್ಸವ ಆಚರಿಸಿ ದೇಶಕ್ಕೆ ತಗುಲಿರುವ ವೈರಸ್​​ ಅನ್ನು ಸಂಹಾರ ಮಾಡಲು ಆ ಜಗನ್ಮಾತೆಯಲ್ಲಿ ಪ್ರಾರ್ಥನೆ ಮಾಡೋಣ ಎಂದರು.

ABOUT THE AUTHOR

...view details