ಕರ್ನಾಟಕ

karnataka

ETV Bharat / state

ಬೈಕ್ ಡಿಕ್ಕಿ... ಸೈಕಲ್ ಸವಾರ ಸ್ಥಳದಲ್ಲೇ ಸಾವು - undefined

ನನದಿವಾಡಿ ಗ್ರಾಮದ ಬಳಿ ಸೈಕಲ್​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಸಾವು

By

Published : Jul 21, 2019, 5:34 PM IST

ಚಿಕ್ಕೋಡಿ : ಸೈಕಲ್​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ನನದಿವಾಡಿ ಗ್ರಾಮದಲ್ಲಿ ನಡೆದಿದೆ.

ನನದಿವಾಡಿ ಗ್ರಾಮದ ಕೃಷ್ಣಾ ದತ್ತು ಪಟವರ್ಧನ (57) ಮೃತವ್ಯಕ್ತಿ ಎಂದು ತಿಳಿದುಬಂದಿದೆ. ಕೃಷ್ಣಾ ಎಂಬುವವರು ಸೈಕಲ್ ಮೇಲೆ ಹೊಲಕ್ಕೆ ಹೋಗುತ್ತಿರುವಾಗ ಯಕ್ಸಂಬಾ-ಚಿಕ್ಕೋಡಿ ಮಧ್ಯೆ ನನದಿವಾಡಿ ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ.

ಸೈಕಲ್ ಹಿಂಬದಿಯಲ್ಲಿ ಕುಳಿತಿದ್ದ ಇಚಲಕರಂಜಿಯ ಪೂಜಾ ಶಿವಾಜಿ ಶಿರಗೂರೆಯವರು ಗಂಭೀರ ಗಾಯಗೊಂಡಿದ್ದಾರೆ. ಈ ಕುರಿತು‌ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details