ಕರ್ನಾಟಕ

karnataka

ETV Bharat / state

ಅತೃಪ್ತ ಶಾಸಕರ ರಾಜೀನಾಮೆ ಪಟ್ಟಿಯಲ್ಲಿ ಸೇರ್ತಾರಾ ಶ್ರೀಮಂತ ಪಾಟೀಲ್​ - ಗಣೇಶ ಹುಕ್ಕೇರಿ? - undefined

ಅತೃಪ್ತ ಶಾಸಕರ ರಾಜೀನಾಮೆ ಪಟ್ಟಿಗೆ ಇನ್ನಷ್ಟು ಶಾಸಕರು ಸೇರುವ ಸಾಧ್ಯತೆಯಿದೆ. ಈ ಪಟ್ಟಿಗೆ ಸದಲಗಾ ಶಾಸಕ ಗಣೇಶ್​ ಹುಕ್ಕೇರಿ ಹಾಗೂ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್​ ಇಂದು ಸೇರಲಿದ್ದಾರೆ ಎನ್ನುತ್ತಿರುವುದು ಕುತೂಹಲ ಮೂಡಿಸಿದೆ.

ಶ್ರೀಮಂತ ಪಾಟೀಲ - ಗಣೇಶ ಹುಕ್ಕೇರಿ

By

Published : Jul 8, 2019, 10:49 AM IST

ಚಿಕ್ಕೋಡಿ‌:ಸದಲಗಾ ಶಾಸಕ ಗಣೇಶ್​ ಹುಕ್ಕೇರಿ ಹಾಗೂ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್​ ಅವರ ಹೆಸರು ಇಂದು ರಾಜೀನಾಮೆ ನೀಡುವ ಸಂಭಾವ್ಯ ಶಾಸಕರ ಪಟ್ಟಿಯಲ್ಲಿವೆ ಎನ್ನಲಾಗ್ತಿದೆ. ಈ ಇಬ್ಬರು ಶಾಸಕರು ಮೊಬೈಲ್ ಸಂಪರ್ಕಕ್ಕೂ ಸಿಗದಿರುವುದು ಇವರ ರಾಜೀನಾಮೆ ವದಂತಿಗೆ ಮತ್ತಷ್ಟು ಪುಷ್ಠಿ ನೀಡುವಂತಿದೆ.

ಕಳೆದ ಎರಡು ದಿನಗಳ ಬೆಳವಣಿಗಳ ಮಧ್ಯೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಶಾಸಕ ಗಣೇಶ್​ ಹುಕ್ಕೇರಿ ಅಪ್ಪನಿಗಾಗಿ ಪದತ್ಯಾಗ ಮಾಡ್ತಾರಾ ? ಎಂಬ ಪ್ರಶ್ನೆಗಳು ಕ್ಷೇತ್ರದ ತುಂಬಾ ಕೇಳಿ ಬರುತ್ತಿವೆ. ಜೊತೆಗೆ, ಲೋಕಸಮರದಲ್ಲಿ ಹೀನಾಯ ಸೋಲಿನಿಂದ ಹೊರ ಬಂದು ಉಪ ಚುಣಾವಣೆ ಎದುರಿಸ್ತಾರಾ ಪ್ರಕಾಶ್ ಹುಕ್ಕೇರಿ? ಎಂದು ಮಾತುಗಳು ಕೇಳಿ ಬರುತ್ತಿವೆ.

ಇನ್ನು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜಕೀಯದಾಟದಲ್ಲಿ ಸೋತು ಸುಣ್ಣವಾಗಿರುವ ಪ್ರಕಾಶ್​ ಹುಕ್ಕೇರಿ ಅವರು ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ. ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿಗೆ ರಮೇಶ್​ ಜಾರಕಿಹೊಳಿ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಪ್ರಕಾಶ್​ ಹುಕ್ಕೇರಿ ಸೋತಿದ್ದರು.

ಪುತ್ರ ಗಣೇಶ್​ ರಾಜೀನಾಮೆ‌ ಕೊಡಿಸಿ ಮತ್ತೆ ರಾಜ್ಯ ರಾಜಕೀಯಕ್ಕೆ ಪ್ರಕಾಶ್​ ಹುಕ್ಕೇರಿ ಧುಮಕುತ್ತಾರಾ ಎಂದು ಅನ್ನೋ ಪ್ರಶ್ನೆ ಸಹ ರಾಜಕೀಯ ವಲಯದಲ್ಲಿ ಎದ್ದಿದೆ.

ಇನ್ನು, ಇಲ್ಲಿಯವರೆಗೂ ಪಕ್ಷ ತೊರೆಯುವುದನ್ನು ನಿರಾಕರಿಸುತ್ತಲೇ ಬಂದಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್​ ಇವರ ಮೊಬೈಲ್ ಕೂಡಾ ಸಂಪರ್ಕಕಕ್ಕೆ ಸಿಗುತ್ತಿಲ್ಲ. ಆದರೆ, ಇಂದಿನ ದಿಢೀರ್ ಬೆಳವಣಿಗೆಯಲ್ಲಿ ಅಚ್ಚರಿಹುಟ್ಟಿಸುವ ಸಾಧ್ಯತೆ ಇದೆಯಾ ಎಂದು ಕಾದು ನೋಡಬೇಕಿದೆ.

ಈಗಾಗಲೇ ಈ ಇಬ್ಬರು ಶಾಸಕರು ಬೆಂಗಳೂರಿಗೆ ತೆರಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದ್ದು, ಇಂದು ರಾಜೀನಾಮೆ ನೀಡುತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

For All Latest Updates

TAGGED:

ABOUT THE AUTHOR

...view details