ಬೆಳಗಾವಿ: ಒಳ್ಳೆಯ ಆಟಗಾರ ಯಾವ ಪಿಚ್ನಲ್ಲಾದರೂ ಆಡುತ್ತಾನೆ. ಒಂದೇ ಪಿಚ್ ಆದ್ರೂ ಸರಿ, ಬೇರೆ ಬೇರೆ ಪಿಚ್ ಆದ್ರೂ ಸರಿ. ಅದೇ ರೀತಿ ಅಮಿತ್ ಶಾ ಯಾವ ಪಿಚ್ನಲ್ಲಿಬೇಕಾದ್ರೂ ಆಡುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಇಡೀ ರಾಜ್ಯವನ್ನು ಫೋಕಸ್ ಮಾಡುವುದು ನಮ್ಮ ಗುರಿ ಎಂದು ಸಿಟಿ ರವಿ ಪ್ರತಿಪಾದಿಸಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಅಮಿತ್ ಶಾ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಚಿಕ್ಕಮಗಳೂರು ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಈಗ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಬಿಜೆಪಿಯಿದೆ. ಒಂದು ಕಾಲದಲ್ಲಿ ನಾವು ಹೇಗಿದ್ವಿ, ಈಗ ಹೇಗಿದ್ದೇವೆ ಎಂಬುದನ್ನು ಕಾಣಬಹುದಾಗಿದೆ. ಪರಿಶ್ರಮ ಹಾಕಿದರೆ ಮುಂದೊಂದು ದಿನ ಲಾಭ ಬರಲಿದೆ. ಅದೇ ರೀತಿ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರದಲ್ಲೂ ನಾವು ಬರುತ್ತೇವೆ. ಹಳೇ ಮೈಸೂರು ಭಾಗವನ್ನು ನಾವು ಹೆಚ್ಚಾಗಿ ಫೋಕಸ್ ಮಾಡುತ್ತಿದ್ದೇವೆ. ಹಿಂದಿನ ಚುನಾವಣೆಯಲ್ಲಿ ನಮಗೆ ಅದು ಅನುಭವವಾಗಿದೆ. ಇನ್ನಷ್ಟು ಸೀಟು ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಹಿಂದುತ್ವದ ಅಜೆಂಡಾ ಮೇಲೆ ಚುನಾವಣೆ:ಆ ಭಾಗದಲ್ಲಿ ಮೆಜಾರಿಟಿ ಬಂದರೆ ಅಧಿಕಾರಕ್ಕೆ ಬರೋದು ಸುಲಭ. ಇದು 2008, 2018 ರ ಚುನಾವಣೆಯಲ್ಲಿ ನಮಗೆ ಗೊತ್ತಾಗಿದೆ, ಹಿಂದುತ್ವದ ಐಡಿಯಾಲಜಿ ಮೇಲೆ ಚುನಾವಣೆಗೆ ಹೋಗುತ್ತೇವೆ. ಹಿಂದುತ್ವ, ಅಭಿವೃದ್ದಿ ಅಜೆಂಡಾದಿಂದ ಚುನಾವಣೆ ಎದುರಿಸುತ್ತೇವೆ.
ರಿಪೋರ್ಟ್ ಕಾರ್ಡ್ ಜನರ ಮುಂದಿಡುತ್ತೇವೆ: ಹಳೇ ಮೈಸೂರು ಭಾಗದಲ್ಲಿ ಸಿದ್ದಾಂತದ ಮೂಲಕ ಚುನಾವಣೆ ಎದುರಿಸುತ್ತೇವೆ. ಜಾತಿಯಡಿ ಅಲ್ಲ ಹಿಂದುತ್ವದ ಅಡಿ ಪಕ್ಷ ಬೆಳೆದಿದೆ ಅದೇ ಸಿದ್ದಾಂತದಲ್ಲಿ ಚುನಾವಣಾ ಎದುರಿಸುತ್ತೇವೆ ಅಭಿವೃದ್ಧಿ ಮತ್ತು ಸಿದ್ದಾಂತದ ಅಡಿಯಲ್ಲಿ ಚುನಾವಣೆ ಎದುರಿಸುತ್ತೇವೆ. ಹಳೆ ಮೈಸೂರು ಭಾಗದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ರಿಪೋರ್ಟ್ ಕಾರ್ಡ್ ಇಡುತ್ತೇವೆ. ದೇವೆಗೌಡರು ಪ್ರಧಾನಿ ಆದಾಗಿನಿಂದಲೂ ಹಾಸನಕ್ಕೆ ವಿಮಾನ ನಿಲ್ದಾಣದ ಕನಸಿತ್ತು. ಆದರೆ ವಿಮಾನ ನಿಲ್ದಾಣ ಆಗಲು ಡಬಲ್ ಇಂಜಿನ ಸರ್ಕಾರ ಬರಬೇಕಾಯಿತು. ಹಾಸನ,ಮಂಡ್ಯ, ಎಲ್ಲ ಕಡೆಯೂ ನಮ್ಮ ರಿಪೋರ್ಟ್ ಕಾರ್ಡ್ ಇದೆ ಅದನ್ನು ಮುಂದಿಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿಶ್ವಾಸದ ಮಾತುಗಳನ್ನಾಡಿದರು.
ಅಮಿತ್ ಶಾರಿಂದ ವಿಶ್ವಾಸ ಅಧಿಕ: ಅಮಿತ್ ಶಾಗೆ ರಾಜಕೀಯ ಚಾಣಕ್ಷ ಅಂತ ಅಭಿದಾನ ಕೊಟ್ಟಿದ್ದಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಅಮಿತ್ ಶಾ ಬದಲಾವಣೆ ತಂದಿದ್ದಾರೆ. ಅಮಿತ್ ಶಾ ಬಂದರೆ ಕಾರ್ಯಕರ್ತರಿಗೆ ವಿಶ್ವಾಸ ಹೆಚ್ಚುತ್ತದೆ. ಅವರು ಯಾವುದೇ ಅಂಗಳದಲ್ಲೂ ಉತ್ತಮ ಪ್ರದರ್ಶನವನ್ನು ನೀಡುತ್ತಾರೆ ಎಂದು ಸಿ ಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು.
ಅಧಿವೇಶನ ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಲ್ಲ ಸಮಗ್ರ ಕರ್ನಾಟಕದ ದೃಷ್ಟಿಯಿಂದ ಅಧಿವೇಶನ ನಡೆಸಲಾಗಿದೆ ಬಜೆಟ್ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆಯಾಗಲಿದೆ ಎಂದು ಸಮರ್ಥನೆ ಮಾಡಿಕೊಂಡರು.
ಇದನ್ನೂ ಓದಿ: ನಿರಂತರ ಜ್ಯೋತಿ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಕೊಡಲು ಸಿದ್ಧ: ಸಚಿವ ಸುನೀಲ್ ಕುಮಾರ್