ಚಿಕ್ಕೋಡಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಪ್ಪಾಣಿಯಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಈ ಕುರಿತು ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ಯೆಗೀಡಾಗಿರುವ ಅಭಿಷೇಕ ದತ್ತವಾಡೆ(22) ಮೂಲತಃ ಮಹರಾಷ್ಟ್ರ ನಿವಾಸಿ. ನಿಪ್ಪಾಣಿ ಪಟ್ಟಣದಲ್ಲಿ ತಾಯಿಯೊಂದಿಗೆ ಈತ ವಾಸವಿದ್ದ. ಕುಟುಂಬ ನಿರ್ವಹಣೆಗೆ ಖಾಸಗಿ ಚಿತ್ರಮಂದಿರದಲ್ಲಿ ಕೆಲಸ ಮಾಡುತಿದ್ದ. ಆದರೆ, ಯಾರೋ ದುಷ್ಕರ್ಮಿಗಳು ಅಭಿಷೇಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದಾರೆ.