ಬೆಳಗಾವಿ:ಜಾಮೀನು ಮಂಜೂರಾದ ಹಿನ್ನೆಲೆ ಸಿಆರ್ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಹಿಂಡಲಗಾ ಜೈಲಿನಿಂದ ಬಿಡುಗಡೆ ಆದರು. ಜಿಲ್ಲೆಯ ಖಾನಾಪುರ ತಾಲೂಕಿನ ತೋರಾವಿ ಗ್ರಾಮದಲ್ಲಿರುವ ಸಿಆರ್ಪಿಎಫ್ ಕಮಾಂಡರ್ ಸೆಂಟರ್ಗೆ ಯೋಧನನ್ನು ಹಿರಿಯ ಅಧಿಕಾರಿಗಳು ಕರೆದೊಯ್ದರು.
ಇದನ್ನೂ ಓದಿ: ಚಿಕ್ಕೋಡಿ ಯೋಧನ ಬಂಧನ: ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಪೊಲೀಸರಿಗೆ ಸಿಆರ್ಪಿಎಫ್ ಎಡಿಜಿಪಿ ಪತ್ರ
ಏ. 23ರಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಆರೋದಡಿ ಸಿಆರ್ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ರನ್ನು ಸದಲಗಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೇ ಕೈಗೆ ಕೋಳ ತೊಡಿಸಿ ಠಾಣೆಯಲ್ಲಿ ಕೂಡಿಸಲಾಗಿತ್ತು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ವಿರೋಧ ಚರ್ಚೆ ಹುಟ್ಟುಹಾಕಿತ್ತು.