ಕರ್ನಾಟಕ

karnataka

ETV Bharat / state

ಬಹುಕೋಟಿ ಠೇವಣಿ ವಂಚನೆ: ಸಿಐಡಿ ಆಮೆಗತಿ ತನಿಖೆಗೆ ಗ್ರಾಹಕರು ಕೆಂಡಾಮಂಡಲ - ಸಂಗೊಳ್ಳಿ ರಾಯಣ್ಣ ಸೊಸೈಟಿ

ಸೊಸೈಟಿ ಮಾಲೀಕ ಹಾಗೂ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ, 300 ಕೋಟಿ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿ ಆಮೆಗತಿಯಲ್ಲಿ ನಡೆಸುತ್ತಿದೆ ಎಂದು ದೂರಿದರು.

ಸಿಐಡಿ ಆಮೆಗತಿ ತನಿಖೆಗೆ ಗ್ರಾಹಕರು ಆಕ್ರೋಶ

By

Published : May 4, 2019, 10:06 AM IST

ಬೆಳಗಾವಿ:ಚಿತ್ರ ನಿರ್ಮಾಪಕ ಆನಂದ ಆಪ್ಪುಗೋಳ ಮಾಲೀಕತ್ವದ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣವನ್ನು ಸಿಐಡಿ ಆಮೆಗತಿಯಲ್ಲಿ ತನಿಖೆ ನಡೆಸುತ್ತಿದೆ ಎಂದು ಆರೋಪಿಸಿ ಗ್ರಾಹಕರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಗ್ರಾಹಕರು ಸಿಐಡಿ ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಜೀವನಪೂರ್ತಿ ದುಡಿದ ಹಣವನ್ನು ಸಾವಿರಾರು ಗ್ರಾಹಕರು ಸೊಸೈಟಿಯಲ್ಲಿ ಠೇವಣಿ ರೂಪದಲ್ಲಿ ಇಟ್ಟಿದ್ದರು. ಸೊಸೈಟಿ ಮಾಲೀಕ ಹಾಗೂ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರು 300 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿ ಆಮೆಗತಿಯಲ್ಲಿ ನಡೆಸುತ್ತಿದೆ ಎಂದು ದೂರಿದರು.

ಸಿಐಡಿ ಆಮೆಗತಿ ತನಿಖೆಗೆ ಗ್ರಾಹಕರು ಆಕ್ರೋಶ

ಇದ್ದ ಹಣವನ್ನೆಲ್ಲ ಠೇವಣಿ ರೂಪದಲ್ಲಿ ಇಡಲಾಗಿದ್ದು, ಚಿಕಿತ್ಸೆಗೆ ಹಣವಿಲ್ಲದೇ ಹಲವು ಗ್ರಾಹಕರು ನಿತ್ಯ ನೋವು ಅನುಭವಿಸುವಂತಾಗಿದೆ ಎಂದು ಅಸಮಾಧಾನ ತೋಡಿಕೊಂಡರು. ಬಳಿಕ ಡಿಸಿ ಮೂಲಕ ಸಿಎಂ ಹಾಗೂ ಗೃಹ ಇಲಾಖೆಗೆ ಗ್ರಾಹಕರು ಮನವಿ ಸಲ್ಲಿಸಿದರು.

ABOUT THE AUTHOR

...view details