ಕರ್ನಾಟಕ

karnataka

ETV Bharat / state

ಪ್ರವಾಹದಲ್ಲಿ ಕೊಚ್ಚಿ ಹೋದ ಬೆಳೆ: ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ - ಗುರ್ಲಹೊಸೂರಿನ ಮಲ್ಲಯ್ಯ ಕೊಡ್ಲಿಮಠ

ಪ್ರವಾಹಕ್ಕೆ ಬೆಳೆ ಕೊಚ್ಚಿ ಹೋದ ಕಾರಣ ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕುರವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

ರೈತ ಆತ್ಮಹತ್ಯೆ

By

Published : Oct 15, 2019, 5:30 AM IST

ಬೆಳಗಾವಿ: ಭೀಕರ ಪ್ರವಾಹಕ್ಕೆ ಬೆಳೆ ಕೊಚ್ಚಿ ಹೋದ ಪರಿಣಾಮ ಸಾಲಭಾದೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿ ತಾಲೂಕಿನ ಕುರವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ಗುರ್ಲಹೊಸೂರಿನ ಮಲ್ಲಯ್ಯ ಕೊಡ್ಲಿಮಠ (32) ಮೃತ ರೈತ. ಸಿಂಡಿಕೇಟ್​​​ ಬ್ಯಾಂಕ್‌ನಲ್ಲಿ ರೂ. 80 ಸಾವಿರ ಬೆಳೆ ಸಾಲ ಹಾಗೂ 2012 ರಲ್ಲಿ ಖಾಸಗಿ ಫೈನಾನ್ಸ್​​ಗಳಿಂದ ಸಾಲ ಪಡೆದು ಮರು ಪಾವತಿಸಲಾಗಿದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರವಾಹದಲ್ಲಿ ಬೆಳೆಯಲ್ಲಾ ನಾಶವಾಗಿದೆ. ಇದಕ್ಕೆ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲವೆಂದು ಸಂಕಷ್ಟದಲ್ಲಿ ಮನನೊಂದ ರೈತ ಮಲ್ಲಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಲಕ್ಷ್ಮೀ ಮಲ್ಲಯ್ಯ ಕೊಡ್ಲಿಮಠ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details