ಬೆಳಗಾವಿ:ವೀರಾಪುರ ಗ್ರಾಮದ ದುಮ್ಮಗೆರೆ ಕೆರೆಯ ನೀರು ನುಗ್ಗಿ ನೂರಾರು ಎಕರೆಯ ಕೃಷಿ ಭೂಮಿ ಜಲಾವೃತಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ನಡೆದಿದೆ.
ಕೃಷಿ ಭೂಮಿಗೆ ನುಗ್ಗಿದ ದುಮ್ಮಗೆರೆ ಕೆರೆ ನೀರು ಕೆರೆ ಭರ್ತಿಯಾದ ಬಳಿಕ ನೀರು ಹರಿಯಲು ಸಮರ್ಪಕ ಕಾಲುವೆ ವ್ಯವಸ್ಥೆ ಇಲ್ಲದೇ, ನೀರು ಜಮೀನುಗಳಿಗೆ ನುಗ್ಗಿದೆ ಎಂದು ಹೇಳಲಾಗುತ್ತಿದೆ. ಹೆಚ್ಚುವರಿ ನೀರು ಹರಿಯಲು ಇದ್ದ ಕಾಲುವೆಯನ್ನು ಕೆಲವರು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನು ಓದಿ:ಚಾಕ್ಪೀಸ್ನಲ್ಲಿ ರಾಷ್ಟ್ರಗೀತೆ ಕೆತ್ತನೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಯುವಕನ ಕಲೆ
ಇನ್ನು ಈ ಸಂಬಂಧ ಅನೇಕಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ.