ಚಿಕ್ಕೋಡಿ:ಕೃಷ್ಣಾ ನದಿ ಸಂಪೂರ್ಣ ಬತ್ತುತ್ತಿದ್ದು, ಸುತ್ತಮುತ್ತ ಕಬ್ಬಿನ ಗದ್ದೆಗಳು ಇರುವುದರಿಂದ ಆಹಾರ ಅರಸಿ ಗದ್ದೆಗಳಿಗೆ ಮೊಸಳೆಗಳು ನುಗ್ಗುತ್ತಿವೆ. ಇದರಿಂದ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ನದಿ ತೀರದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಚಿಕ್ಕೋಡಿಯಲ್ಲಿ ಮೊಸಳೆಗಳ ಕಾಟ... ಕಂಗೆಟ್ಟ ಜನ - undefined
ಕಳೆದ ಒಂದು ವಾರದಿಂದ ಆಹಾರ ಅರಸಿ ಅಥಣಿ ತಾಲೂಕಿನ ಹುಲಗಬಾಳ, ಕಾಗವಾಡ ಗ್ರಾಮಗಳಿಗೆ ಮೊಸಳೆಗಳು ನುಗ್ಗುತ್ತಿವೆ. ಇದರಿಂದ ಜನರು ಆತಂಕದಲ್ಲೇ ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ವಾರದಿಂದ ಆಹಾರಕ್ಕಾಗಿ ಮೊಸಳೆಗಳು ಕಬ್ಬು ಹಾಗೂ ಬಾಳೆ ತೋಟಗಳಿಗೆ ನುಗ್ಗುತ್ತಿವೆ. ಅಥಣಿ ತಾಲೂಕಿನ ಹುಲಗಬಾಳ, ಕಾಗವಾಡ ಗ್ರಾಮಗಳಲ್ಲಿ ಮೊಸಳೆ ಹಾವಳಿಯಿಂದ ಜನರು ಚಿಂತೆಗೀಡಾಗಿದೆ. ಅಲ್ಲದೆ, ಜನರಿಗೆ ರಾತ್ರಿ ವೇಳೆ ಭಯದಿಂದ ಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಿನ್ನೆ ಹುಲಗಬಾಳ ಗ್ರಾಮದ ಪವಾರ್ ಎಂಬುವರ ತೋಟದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ಗ್ರಾಮದಲ್ಲಿ ಇಲ್ಲಿಯವರೆಗೂ ಒಟ್ಟು ಆರು ಮೊಸಳೆಗಳು ಕಂಡು ಬಂದಿವೆ. ಈ ಕುರಿತಂತೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.