ಕರ್ನಾಟಕ

karnataka

ETV Bharat / state

ತಾಯಿಯಿಂದಲೇ ಮಗನ ಹತ್ಯೆ! ಬಾಲಾಪರಾಧಿ ಸೇರಿ ಒಟ್ಟು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು - ತಾಯಿಯಿಂದ ಮಗನ ಕೊಲೆ

ಖಾಸಗಿ ವಿಚಾರವಾಗಿ ತಾಯಿಯೇ ಪುತ್ರನನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ತಾಯಿ ಮತ್ತು ಬಾಲಾಪರಾಧಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Mother killed her son
Mother killed her son

By

Published : Jun 23, 2023, 2:33 PM IST

Updated : Jun 23, 2023, 7:48 PM IST

ಚಿಕ್ಕೋಡಿ: ತಾಯಿಗಿಂತ ಮಿಗಿಲಾದ ದೇವರಿಲ್ಲ ಅಂತಾರೆ. ಆದರೆ, ಇಲ್ಲಿ ತಾಯಿಯೇ ಬೆಳೆದು ನಿಂತ ಮಗನ ಕತ್ತು ಹಿಸುಕಿ ಕೊಲೆಗೈದು ಇದೀಗ ಜೈಲುಪಾಲಾಗಿರುವ ವಿಲಕ್ಷಣ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ನಿವಾಸಿ ಹರಿಪ್ರಸಾದ್ ಬೋಸ್ಲೆ (21) ಕೊಲೆಯಾದ ಯುವಕ. ಸುಧಾ ಬೋಸ್ಲೆ ಜೈಲುಪಾಲಾದ ತಾಯಿ. ಕೊಲೆಗೆ ಸಹಕರಿಸಿದ ವೈಶಾಲಿ ಸುಲೀನ ಮಾನೆ, ಗೌತಮ್ ಸುನೀಲ್ ಮಾನೆ, ಹಾಗೂ ಒಬ್ಬ ಬಾಲಾಪರಾಧಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಬೆಳಗಾವಿ ಎಸ್​ಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಆರಂಭದಲ್ಲಿ ಈ ಪ್ರಕರಣವನ್ನು ಸಹಜ ಸಾವೆಂದು ಪರಿಗಣಿಸಿಸಲಾಗಿತ್ತು. ಆದರೆ, ಕೊಲೆಗೀಡಾದ ಯುವಕನ ಸಂಬಂಧಿಕರು ಸಂಶಯಗೊಂಡು ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರಂತೆಯೇ ತನಿಖೆ ಕೈಗೊಂಡಾಗ ತಾಯಿ ಸುಧಾ ಬೋಸ್ಲೆಯೇ ಪುತ್ರ ಹರಿಪ್ರಸಾದ್ ಬೋಸ್ಲೆ ಅವರನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಅಲ್ಲದೇ ಈ ಕೊಲೆಗೆ ಸಹಕರಿಸಿದ ಓರ್ವ ಬಾಲಾಪರಾಧಿ ಸೇರಿದಂತೆ ವೈಶಾಲಿ ಸುಲೀನ ಮಾನೆ, ಗೌತಮ್ ಸುನೀಲ್ ಮಾನೆ ಎಂಬುವರನ್ನು ಬಂಧಿಸಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಬಾಡಿಗೆದಾರರ ಕಿರುಕುಳ ತಾಳಲಾರದೇ ಮನೆ ಯಜಮಾನಿ ಆತ್ಮಹತ್ಯೆ: ಮಗಳ ಸಾವಿನ ಸುದ್ದಿ ತಿಳಿದು ತಾಯಿಗೂ ಹೃದಯಾಘಾತ

ಘಟನೆ ವಿವರ:ಮೃತ ಹರಿಪ್ರಸಾದನ ತಾಯಿ ಸುಧಾ ಬೋಸ್ಲೆ (ಎ1 ಆರೋಪಿ) ಕಳೆದ ಆರು ತಿಂಗಳ ಹಿಂದೆಯೇ ಪತಿ ಸಂತೋಷ್ ಬೋಸ್ಲೆ ಜೊತೆ ಜಗಳ ಮಾಡಿಕೊಂಡಿದ್ದರು. ಇದರಿಂದ ಬೇರೆ ಕಡೆ ಮನೆಮಾಡಿ ವಾಸವಾಗಿದ್ದರು. ಸುಧಾ ಜೊತೆ ಮಗ ಹರಿಪ್ರಸಾದ್ ಕೂಡ ವಾಸವಾಗಿದ್ದ. ಆದರೆ, ಕೆಲವು ವೈಯಕ್ತಿಕ ಕಾರಣಗಳಿಂದ ಹರಿಪ್ರಸಾದ್ ತಾಯಿ ಜೊತೆ ದಿನನಿತ್ಯ ಜಗಳ ತೆಗೆಯುತ್ತಿದ್ದ. ಅಲ್ದೆ ತಂದೆ ಸಂತೋಷ್ ಹಾಗೂ ಸಂಬಂಧಿಕರಿಗೆ ತಾಯಿಯ ಕೆಲವು ಖಾಸಗಿ ವಿಚಾರಗಳ ಕುರಿತು ಹೇಳುತ್ತಿದ್ದ. ಹಾಗಾಗಿ ಸುಧಾ ಈ ಕುರಿತು ಪುತ್ರ ಹರಿಪ್ರಸಾದ್​ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ, ಕಳೆದು ತಿಂಗಳ 28ರಂದು ಮನೆಯಲ್ಲಿ ಮಲಗಿದ್ದ ಹರಿಪ್ರಸಾದ್ ಅನುಮಾನ ಬರುವ ರೀತಿಯಲ್ಲಿ ಮೃತಪಟ್ಟಿದ್ದ. ಪತಿ ಸಂತೋಷ್​ ಹಾಗೂ ಸಂಬಂಧಿಕರಿಗೆ ಕರೆ ಮಾಡಿದ ಸುಧಾ ಬೋಸ್ಲೆ, ಹರಿಪ್ರಸಾದ್​ಗೆ ಹೃದಯಾಘಾತವಾಗಿದೆ. ಮಲಗಿಕೊಂಡ ಲ್ಲಿಯೇ ಮೃತಪಟ್ಟಿದ್ದಾನೆಂದು ತಿಳಿಸಿದ್ದಳು.

ಘಟನೆ ಬಗ್ಗೆ ಸಂಶಯಗೊಂಡ ಸಂಬಂಧಿಕರು ರಾಯಭಾಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು. ಅವರ ಹೇಳಿಕೆಯಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ತನಿಖೆ ವೇಳೆ ಹರಿಪ್ರಸಾದ್ ಬೋಸ್ಲೆ ಕುತ್ತಿಗೆಯ ಮೇಲೆ ಕೆಲವು ಗಾಯಗಳಾಗಿರುವ ಬಗ್ಗೆ ಪೊಲೀಸರು ಗಮನಿಸಿದ್ದರು. ಯಾರೋ ಕೊಲೆ ಮಾಡಿರುವ ಬಗ್ಗೆ ಅನುಮಾನ ದಟ್ಟವಾಗಿತ್ತು. ಮೇಲ್ನೋಟಕ್ಕೆ ತಾಯಿಯೇ ಹರಿಪ್ರಸಾದನ ಕೊಲೆ ಮಾಡಿರುವ ಬಗ್ಗೆ ಸಂಶಯ ಬಂದಿತ್ತು. ಕರೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ. ಪ್ರಕರಣದಲ್ಲಿ ಒಟ್ಟು 7 ಜನ ಆರೋಪಿತರಿದ್ದಾರೆ. ಸದ್ಯ ಈಗ ಓರ್ವ ಬಾಲಾಪರಾಧಿ ಸೇರಿ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಸಂಜೀವ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಗಾಂಜಾ, ಮದ್ಯಸೇವನೆ ಚಟ.. 8 ಜನರನ್ನು ಹತ್ಯೆ ಮಾಡಿದ್ದ ಸೈಕೋ ಕಿಲ್ಲರ್​ ಬಂಧನ : ನಿಟ್ಟುಸಿರು ಬಿಟ್ಟ ಜನ

Last Updated : Jun 23, 2023, 7:48 PM IST

ABOUT THE AUTHOR

...view details