ಚಿಕ್ಕೋಡಿ: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಸಿಆರ್ಪಿಎಫ್ ಯೋಧನೊಬ್ಬ ಹಲ್ಲೆ ನಡೆಸಿರುವ ಆರೋಪ ಪ್ರಕರಣ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದಿದೆ.
ಪೊಲೀಸ್ ಸಿಬ್ಬಂದಿ ಮೇಲೆ ಸಿಆರ್ಪಿಎಫ್ ಯೋಧನಿಂದ ಹಲ್ಲೆ ಆರೋಪ- ವಿಡಿಯೋ - soldier attack on police cop
ಅನಗತ್ಯವಾಗಿ ಸುತ್ತಾಡುತ್ತಿದ್ದ ಸಿಆರ್ಪಿಎಫ್ ಯೋಧನಿಗೆ ಬುದ್ಧಿ ಹೇಳಿದ ಪೊಲೀಸರ ಮೇಲೆಯೇ ಆತನ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ. ಚಿಕ್ಕೋಡಿ ತಾಲೂಕಿನಲ್ಲಿ ಪ್ರಕರಣ ನಡೆದಿದ್ದು, ಸದ್ಯ ಯೋಧನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
![ಪೊಲೀಸ್ ಸಿಬ್ಬಂದಿ ಮೇಲೆ ಸಿಆರ್ಪಿಎಫ್ ಯೋಧನಿಂದ ಹಲ್ಲೆ ಆರೋಪ- ವಿಡಿಯೋ CR PF soldier attack on police cop](https://etvbharatimages.akamaized.net/etvbharat/prod-images/768-512-6911996-379-6911996-1587646637937.jpg)
ಪೊಲೀಸ್ ಸಿಬ್ಬಂದಿ ಮೇಲೆ ಸಿಆರ್ಪಿಎಫ್ ಯೋಧನ ಹಲ್ಲೆ
ಪೊಲೀಸ್ ಸಿಬ್ಬಂದಿ ಮೇಲೆ ಸಿಆರ್ಪಿಎಫ್ ಯೋಧನಿಂದ ಹಲ್ಲೆ ಆರೋಪ
ಯೋಧ ಸಚಿನ್ ಸಾವಂತ ಮನೆಯ ಹೊರಗೆ ಅನಗತ್ಯವಾಗಿ ತಿರುಗಾಡುತ್ತಿದ್ದ. ಆಗ ಆತನಿಗೆ ಪೊಲೀಸರು ಬುದ್ಧಿ ಹೇಳಿದ್ದಕ್ಕೆ ಪೊಲೀಸ್ ಸಿಬ್ಬಂದಿಯ ಕಾಲರ್ ಹಿಡಿದು, ಎಳೆದಾಡಿ ಹೊಡೆದಿದ್ದಾನೆ ಎಂದು ದೂರಲಾಗಿದೆ.
ಯೋಧನಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.