ಕರ್ನಾಟಕ

karnataka

ETV Bharat / state

ಕೊರೊನಾ ಗೆದ್ದ ಖಡೇಬಜಾರ್ ಸರ್ಕಲ್​ ಇನ್ಸ್​ಪೆಕ್ಟರ್: ಕರ್ತವ್ಯಕ್ಕೆ ಹಾಜರು, ಸನ್ಮಾನ - belgavi corona cases

ಗಡಿ ನಾಡಿ ಬೆಳಗಾವಿಯ ಖಡೇಬಜಾರ್ ಸಿಪಿಐ ಧೀರಜ್ ಸಿಂಧೆ ಅವರನ್ನು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ್ದು, ಎಸಿಪಿ ನಾರಾಯಣ ಭರಮನಿ ಸನ್ಮಾನಿಸಿ, ಸ್ವಾಗತಿಸಿದರು.

CPI cure from corona virus in belgavi
ಎಸಿಪಿ ನಾರಾಯಣ ಭರಮನಿ

By

Published : Aug 14, 2020, 5:00 PM IST

ಬೆಳಗಾವಿ: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ ಖಡೇಬಜಾರ್ ಸರ್ಕಲ್​ ಇನ್ಸ್​ಪೆಕ್ಟರ್​ ಧೀರಜ್ ಸಿಂಧೆ ಅವರನ್ನು ಎಸಿಪಿ ನಾಯರಾಯಣ ಭರಮನಿ ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಸನ್ಮಾನಿಸಿದರು.

ಎಸಿಪಿ ನಾರಾಯಣ ಭರಮನಿ

ಮಾಚ್೯ ನಿಂದ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹೆಚ್ಚಾಗಿದೆ. ಪೊಲೀಸ್ ಇಲಾಖೆಯಲ್ಲಿ ಒಟ್ಟು 30 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರಲ್ಲಿ ಖಡೇಬಜಾರ್ ಪೊಲೀಸ್ ಠಾಣೆಯ ಪಿಎಸ್​ಐಗೂ ಸೋಂಕು ದೃಢಪಟ್ಟಿತ್ತು ಎಂದು ಎಸಿಪಿ ನಾರಾಯಣ ಭರಮನಿ ತಿಳಿದರು.

ವೈದ್ಯರ ಸಲಹೆ ಮೇರೆಗೆ ಕಳೆದ 11 ದಿನಗಳಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ಯಾರು ಭಯ ಪಡುವ ಅಗತ್ಯವಿಲ್ಲ. ಈ ಮೊದಲು ಹಿರೇಬಾಗೇವಾಡಿ ಗ್ರಾಮದಲ್ಲಿ ದೆಹಲಿಯ ಮರ್ಕತ್​ಗೆ ಹೋಗಿ ಬಂದವರಿಗೆ ಕೊರೊನಾ ಸೋಂಕು ಕಾಡಿತ್ತು. ಬೆಳಗಾವಿ ಜಿಲ್ಲೆ ಮೂರು ರಾಜ್ಯಗಳ ಸಂಪರ್ಕಕೊಂಡಿಯಾಗಿದೆ ಎಂದರು.

ಪೊಲೀಸರು ತಮ್ಮ ಆರೋಗ್ಯದ ಕಡೆ ಗಮನ ಹರಿಸುವುದು ಮುಖ್ಯ. ಕೊರೊನಾ ಬಗ್ಗೆ ಆತಂಕ ಬೇಡ. ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು. ಖಡೇಬಜಾರ್ ಠಾಣೆಯ ಎಸಿಪಿ ಡಾ.ಚಂದ್ರಪ್ಪ, ಮಾಳಮಾರುತಿ ಸಿಪಿಐ ಬಿ.ಆರ್.ಗಡ್ಡೇಕರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ABOUT THE AUTHOR

...view details