ಬೆಳಗಾವಿ:ನ್ಯಾಯವಾದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಾಳಮಾರುತಿ ಠಾಣೆ ಸಿಪಿಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಳಗಾವಿ ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ನ್ಯಾಯವಾದಿಗೆ ಸಿಪಿಐ ನಿಂದನೆ; ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ - ಮಾಳಮಾರುತಿ ಠಾಣೆ ಸಿಪಿಐ ವಿರುದ್ಧ ಕ್ರಮ
ಸಂಜೆವರೆಗೆ ಪ್ರತಿಭಟನೆ ಕೈಬಿಡದ ಕಾರಣ ಸಿಪಿಐ ಸುನೀಲ ಪಾಟೀಲರನ್ನೇ ಸ್ಥಳಕ್ಕೆ ಕರೆಯಿಸಲಾಯಿತು. ಈ ವೇಳೆ ಮಾತನಾಡಿದ ಸಿಪಿಐ, ನಾನೇನು ನ್ಯಾಯವಾದಿಗೆ ನಿಂದಿಸಿಲ್ಲ. ಅವರು ಹಾಗೇ ತಿಳಿದುಕೊಂಡರೆ ಕ್ಷಮೆ ಕೇಳುವೆ ಎಂದರು.
ಬೆಳಗಾವಿಯ ಡಿಸಿ ಕಚೇರಿ ಎದುರಿನ ರಸ್ತೆ ತಡೆದು ಸಿಪಿಐ ಸುನೀಲ ಪಾಟೀಲ ವಿರುದ್ಧ ಘೋಷಣೆ ಕೂಗಿದರು. ಬೆಳಗ್ಗೆಯಿಂದ ಸಂಜೆವರೆಗೆ ರಸ್ತೆ ತಡೆ ನಡೆಸಿದಕ್ಕೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.
ಸ್ಥಳಕ್ಕೆ ಡಿಸಿಪಿ ವಿಕ್ರಮ ಆಮಟೆ ಭೇಟಿ ನೀಡಿ ಪ್ರತಿಭಟನಾ ನಿರತರ ಜೊತೆಗೆ ಸಂಧಾನಕ್ಕೆ ಮುಂದಾದರು. ಸಿಪಿಐ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂಜಿ ಹಿರೇಮಠ ಭೇಟಿ ನೀಡಿ ಮಾತುಕತೆಗೆ ಮುಂದಾದರೂ ವಕೀಲರು ಸಡಿಲಿಸಲಿಲ್ಲ.
ಸಂಜೆವರೆಗೆ ಪ್ರತಿಭಟನೆ ಕೈಬಿಡದ ಕಾರಣ ಸಿಪಿಐ ಸುನೀಲ ಪಾಟೀಲರನ್ನೇ ಸ್ಥಳಕ್ಕೆ ಕರೆಯಿಸಲಾಯಿತು. ಈ ವೇಳೆ ಮಾತನಾಡಿದ ಸಿಪಿಐ, ನಾನೇನು ನ್ಯಾಯವಾದಿಗೆ ನಿಂದಿಸಿಲ್ಲ. ಅವರು ಹಾಗೇ ತಿಳಿದುಕೊಂಡರೆ ಕ್ಷಮೆ ಕೇಳುವೆ ಎಂದರು. ಅಷ್ಟಕ್ಕೆ ವಕೀಲರು ಘೋಷಣೆ ಕೂಗಿ ಪ್ರತಿಭಟನೆ ಹಿಂಪಡೆದರು.