ಕರ್ನಾಟಕ

karnataka

ETV Bharat / state

ತಾವೇ ಬೂತ್​ ಮಟ್ಟದ ಅಧಿಕಾರಿಗಳು ಎಂದು ಹೇಳಿರುವ ಬಗ್ಗೆ ಎಫ್​ಐಆರ್​ನಲ್ಲಿ ಉಲ್ಲೇಖವಿದೆ: ಪ್ರತಾಪ್​ ರೆಡ್ಡಿ

ಕೆಲವು ವ್ಯಕ್ತಿಗಳು ತಾವೇ ಬೂತ್​ ಮಟ್ಟದ ಅಧಿಕಾರಿಗಳು ಅಂತ ಹೇಳಿಕೊಂಡು ಹೋಗಿರುವ ಬಗ್ಗೆ ಎಫ್​ಐಆರ್​ನಲ್ಲಿ ಉಲ್ಲೇಖವಿದೆ. ಹೀಗಂತ ಹೇಳಿಕೊಂಡು ಹೋದವರನ್ನು ಪತ್ತೆ ಮಾಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದರು.

CP Response on Voter ID Fraud
CP Response on Voter ID Fraud

By

Published : Nov 18, 2022, 2:16 PM IST

ಬೆಂಗಳೂರು: ಮತದಾರರ ಸಮೀಕ್ಷೆ ಖಾಸಗಿತನಕ್ಕೆ ಧಕ್ಕೆ ತಂದ‌ ಆರೋಪ ಸಂಬಂಧ ಕಾಂಗ್ರೆಸ್ ಮುಖಂಡರು ಈಗಾಗಲೇ ದೂರು ನೀಡಿದ್ದಾರೆ. ನೀಡಿದ ಈ ದೂರಿನ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದರು.

ಮತದಾರರ ಮತಪಟ್ಟಿ ಪರಿಷ್ಕರಣೆ ಮಾಹಿತಿ ಕಳವು ಹಿನ್ನೆಲೆ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಅವರ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಹಲಸೂರ್ ಗೇಟ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.

ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಸಂಸ್ಥೆಯ ನಿರ್ದೇಶಕರು ಕಚೇರಿ ಖಾಲಿ ಮಾಡಿದ್ದಾರೆ. ಚಿಲುಮೆ ಸಂಸ್ಥೆಗೆ, ತನಿಖಾಧಿಕಾರಿಗಳು ಕಚೇರಿ ಪರಿಶೀಲನೆಗೆ ತೆರಳಲಿದ್ದಾರೆ. ಈಗಾಗಲೇ ಕಚೇರಿ ಕಾವಲಿಗೆ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಿದ್ದೇವೆ. ತನಿಖೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ರೋಬೋಗಳಿಂದ ಈ ಪಕ್ಷದ ಅಭ್ಯರ್ಥಿಯಿಂದ ಮತಯಾಚನೆ.. ಗುಜರಾತ್​ ಚುನಾವಣೆಯಲ್ಲಿ ತಂತ್ರಜ್ಞಾನ ಬಳಕೆ

ABOUT THE AUTHOR

...view details