ಬೆಳಗಾವಿ :ಮುಂದಿನ ಸೋಮವಾರದಿಂದ ಶ್ರಾವಣ ಮಾಸ ಆರಂಭವಾಗಲಿದ್ದು, ನಗರದಲ್ಲಿಂದು ನಾಟಿಕೋಳಿ ಖರೀದಿಗೆ ಜನ ಮುಗಿಬಿದ್ದಿದ್ದ ದೃಶ್ಯಗಳು ಕಂಡು ಬಂದವು. ಕೋಳಿ ಖರೀದಿಯ ಭರಾಟೆಯಲ್ಲಿ ಜನ ಸಾಮಾಜಿಕ ಅಂತರ ಮರೆತು ಗುಂಪು ಸೇರಿದ್ದರು. ಬಹುತೇಕ ಮಂದಿ ಕನಿಷ್ಠ ಮಾಸ್ಕ್ ಕೂಡ ಧರಿಸಿರಲಿಲ್ಲ.
ಕೋಳಿ, ಹೂವು ಖರೀದಿಗೆ ಮುಗಿಬಿದ್ದ ಜನ ಹೂವಿನ ಮಾರುಕಟ್ಟೆಯಲ್ಲೂ ಜನ ಜಂಗುಳಿ : ಕೋಳಿ ಖರೀದಿಗೆ ಮಾತ್ರವಲ್ಲದೆ ಹೂವಿನ ಮಾರುಕಟ್ಟೆಯಲ್ಲೂ ಜನ ಜಂಗುಳಿ ಕಂಡು ಬಂತು. ನಗರದ ಪ್ರಮುಖ ಹೂವಿನ ಮಾರುಕಟ್ಟೆ ಅಶೋಕನಗರದ ಪುಷ್ಪ ಹರಾಜು ಕೇಂದ್ರದಲ್ಲಿ ಯಾವುದೇ ಕೋವಿಡ್ ನಿಯಮಗಳನ್ನು ಪಾಲಿಸದೆ ಜನ ಮೈಮರೆತಿದ್ದರು.
ಹೂವಿನ ಮಾರುಕಟ್ಟೆಯಲ್ಲಿ ಜನ ಜಂಗುಳಿ ಮಹಾರಾಷ್ಟ್ರದ ಗಡಿ ಜಿಲ್ಲೆಯಾದ್ದರಿಂದ ಬೆಳಗಾವಿಯಲ್ಲಿ ಕೋವಿಡ್ ಆತಂಕ ಹೆಚ್ಚಾಗಿದೆ. ಯಾಕೆಂದರೆ ಈಗಾಗಲೇ ಮಹಾರಾಷ್ಟ್ರದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಮೂರನೇ ಅಲೆಯ ಎಲ್ಲಾ ಮುನ್ಸೂಚನೆಗಳು ಗೋಚರಿಸುತ್ತಿವೆ. ಆದರೆ, ಜನ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬೇಜವ್ದಾರಿ ತೋರುತ್ತಿದ್ದಾರೆ.
ಓದಿ : ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ದೇ ಬಿಟ್ರೆ ಸಸ್ಪೆಂಡ್ ಆಗ್ತೀರಿ: ಚೆಕ್‍ಪೋಸ್ಟ್ ಸಿಬ್ಬಂದಿಗೆ ಸಚಿವ ಸೋಮಶೇಖರ್ ತರಾಟೆ!