ಕರ್ನಾಟಕ

karnataka

ETV Bharat / state

ಗೋಕಾಕಿನಲ್ಲಿ ಮೊಹರಂ ಹಬ್ಬದ ಗಮ್ಮತ್ತು: ಜನಸಂದಣಿಯಲ್ಲಿ ಕೋವಿಡ್​ ನಿಯಮ ಮಾಯ - Gokak News

ಗೋಕಾಕ್​ ತಾಲೂಕಿನ ಗೋಕಾಕ್​ ಫಾಲ್ಸ್​ನಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿ‌ ಗ್ರಾಮಸ್ಥರು ಮೊಹರಂ ಹಬ್ಬ ಆಚರಿಸಿದ್ದಾರೆ‌.

gokak
ಮೊಹರಂ ಹಬ್ಬ ಆಚರಣೆ

By

Published : Aug 19, 2021, 11:10 AM IST

ಬೆಳಗಾವಿ: ಕೊರೊನಾ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಗಡಿ ಭಾಗದ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದೆ. ಆದರೆ ಜಿಲ್ಲೆಯ ಗೋಕಾಕ್​ ತಾಲೂಕಿನ ಗೋಕಾಕ್​ ಫಾಲ್ಸ್​ನಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿ‌ ಗ್ರಾಮಸ್ಥರು ಅದ್ಧೂರಿಯಾಗಿ ಮೊಹರಂ ಹಬ್ಬ ಆಚರಿಸಿದ್ದಾರೆ‌.

ಮೊಹರಂ ಆಚರಣೆ ನಿಮಿತ್ತ ಗ್ರಾಮದಲ್ಲಿ‌ ನಿನ್ನೆ ರಾತ್ರಿ ಮೆರವಣಿಗೆ ನಡೆದಿದ್ದು, ಸಾವಿರಾರು ಜನರು ‌ಪಾಲ್ಗೊಂಡಿದ್ದರು. ಈ ವೇಳೆ ಜನತೆ ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ನಿರ್ಲಕ್ಷ ವಹಿಸಿದ್ದಾರೆ.

ಮೊಹರಂ ಹಬ್ಬ ಆಚರಣೆ

ನೆರೆಯ ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಿದ್ದರೂ ಮುಂಜಾಗ್ರತೆ ವಹಿಸದೇ ಜನರು ನಿರ್ಲಕ್ಷ್ಯ ವಹಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ನಿಯಮಗಳ ಜಾರಿಗೆ ಮುಂದಾಗಬೇಕಿದ್ದ ಗೋಕಾಕ್ ತಾಲೂಕು ಆಡಳಿತ ಕೂಡ ನಿರ್ಲಕ್ಷ್ಯ ‌ವಹಿಸಿದೆ.

ABOUT THE AUTHOR

...view details