ETV Bharat Karnataka

ಕರ್ನಾಟಕ

karnataka

ETV Bharat / state

’’3 ತಿಂಗಳ ಹಸುಗೂಸು, ಐದು ವರ್ಷದ ಮಗು ಇದೆ, ಈ ಪರಿಸ್ಥಿತಿ ಯಾರಿಗೂ ಬಾರದಿರಲಿ’’ - covid infected man died by self medication

ಬೆಂಗಳೂರಿನ ಚಿಪ್ಲಾ ಕಂಪನಿಯಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥನಾಗಿ ಅಣ್ಣ ಕೆಲಸ ಮಾಡುತ್ತಿದ್ದ. ಅಣ್ಣನಿಗೆ ಮೂರು ತಿಂಗಳ ಹಸುಗೂಸು ಹಾಗೂ ಐದು ವರ್ಷದ ಮಗು ಇದೆ. ನಮಗೆ ಬಂದಂತ ಪರಿಸ್ಥಿತಿ ಯಾರಿಗೂ ಬಾರದಿರಲಿ..

belgavi
belgavi
author img

By

Published : Apr 30, 2021, 5:43 PM IST

Updated : Apr 30, 2021, 6:25 PM IST

ಬೆಳಗಾವಿ: ಕೊರೊನಾ ಗುಣಲಕ್ಷಣಗಳು ಬಂದ್ರೆ ಯಾರೂ ಸಹ ಸೆಲ್ಫ್​ ಮೆಡಿಕೇಶನ್ ತಗೋಬೇಡಿ, ಕೋವಿಡ್ ಟೆಸ್ಟ್ ಮಾಡಿಸಿ ಎಂದು ಕೊರೊನಾದಿಂದ ಮೃತಪಟ್ಟ ಸಹೋದರ ಮನವಿ ಮಾಡಿಕೊಂಡಿದ್ದಾರೆ.

ಗೋಕಾಕ್​ ತಾಲೂಕಿನ ಕೊಣ್ಣೂರ ಗ್ರಾಮದ 36 ವರ್ಷದ ವ್ಯಕ್ತಿಯೊಬ್ಬರು ಕೊರೊನಾಗೆ ತುತ್ತಾಗಿ ಮೃತಪಟ್ಟಿದ್ದರು. ಸಹೋದರನ ಸಾವಿನಿಂದ ಕಂಗಾಲಾಗಿರುವ ಆತನ ಸಹೋದರರು ಮಾತನಾಡಿದ್ದು, ಕೋವಿಡ್ ಗುಣಲಕ್ಷಣ ಇದ್ರೆ ಮೈಮರೆಯದೇ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಬೇಕು.

ಮೃತರ ಸಂಬಂಧಿಕರ ಮಾತು

ಕೋವಿಡ್ ಗುಣಲಕ್ಷಣ ಇದ್ದರೂ ಸೆಲ್ಫ್​ ಮೆಡಿಕೇಷನ್‌ಗೆ ಹೋಗಿದ್ದು,ಸಹೋದರನ ಸಾವಿಗೆ ಕಾರಣವಾಯಿತು. ಯಾವುದೇ ಚಟಗಳಿಲ್ಲದೇ ಆರೋಗ್ಯವಾಗಿದ್ದ ಅವರಿಗೆ ಕೊರೊನಾ ಗುಣಲಕ್ಷಣ ಕಂಡು ಬಂದಿತ್ತು. ಆದ್ರೆ, ಕೋವಿಡ್ ಬಗ್ಗೆ ನಿರ್ಲಕ್ಷ್ಯವಹಿಸಿದ್ದ ಆತ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದೇ‌ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಆದರೆ, ಕಳೆದ ಒಂದು ವಾರದ ಹಿಂದೆ ಉಸಿರಾಟದ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲು ರ್ಯಾಪಿಡ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿತ್ತು‌. ಬಳಿಕ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿದಾಗ ಕೋವಿಡ್ ದೃಢವಾಗಿದೆ.

ಬಳಿಕ ಉಸಿರಾಟದ ಸಮಸ್ಯೆ ಹೆಚ್ಚಾದ ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಿಸಿ ರೆಮ್ಡೆಸಿವಿರ್ ಇಂಜೆಕ್ಷನ್, ವೆಂಟಿಲೇಟರ್, ಆಕ್ಸಿಜನ್ ಎಲ್ಲ ವ್ಯವಸ್ಥೆ ಕಲ್ಪಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹೀಗಾಗಿ, ಯಾರೂ ಮೈಮರೆಯದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದಿದ್ದಾರೆ.

ಬೆಂಗಳೂರಿನ ಚಿಪ್ಲಾ ಕಂಪನಿಯಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥನಾಗಿ ಅಣ್ಣ ಕೆಲಸ ಮಾಡುತ್ತಿದ್ದ. ಅಣ್ಣನಿಗೆ ಮೂರು ತಿಂಗಳ ಹಸುಗೂಸು ಹಾಗೂ ಐದು ವರ್ಷದ ಮಗು ಇದೆ. ನಮಗೆ ಬಂದಂತ ಪರಿಸ್ಥಿತಿ ಯಾರಿಗೂ ಬಾರದಿರಲಿ. ಹೀಗಾಗಿ, ಎಲ್ಲರೂ ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

Last Updated : Apr 30, 2021, 6:25 PM IST

ABOUT THE AUTHOR

...view details